Tuesday, 25th February 2020

ರೈಲ್ವೆ ನಿಲ್ದಾಣದಲ್ಲಿ ಹಲವು ಯುವತಿಯರನ್ನು ಪ್ರೀತಿಸಿದ್ದೇನೆ: ಶಾರುಖ್ ಖಾನ್

ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರು ರೈಲ್ವೆ ನಿಲ್ದಾಣದಲ್ಲಿ ನಾನು ಹಲವು ಯುವತಿಯರನ್ನು ಪ್ರೀತಿಸಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಶುಕ್ರವಾರ ಶಾರುಖ್ ಖಾನ್ ಪೋಸ್ಟಲ್ ಕವರ್ ಉದ್ಘಾಟಿಸಲು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರು ತಾನು ಹಲವು ಸಿನಿಮಾಗಳಲ್ಲಿ ನಟಿಯರ ಜೊತೆ ರೈಲ್ವೆ ನಿಲ್ದಾಣದಲ್ಲಿ ರೊಮ್ಯಾನ್ಸ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾರುಖ್, “ಇಲ್ಲಿ ಇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಏಕೆಂದರೆ ರೈಲ್ವೆ ನಿಲ್ದಾಣದಲ್ಲಿ ನಾನು ಹಲವು ಯುವತಿಯರನ್ನು ಪ್ರೀತಿಸಿದ್ದೇನೆ. ಆದರೆ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ನಾನು ಯಾರನ್ನು ಪ್ರೀತಿಸರಲಿಲ್ಲ. ನನಗೆ ಇಲ್ಲಿ ಆಹ್ವಾನಿಸಿದಕ್ಕೆ ಧನ್ಯವಾದಗಳು. ಸದ್ಯ ನಾನು ಈಗ ಈ ರೈಲ್ವೆ ನಿಲ್ದಾಣ ನೋಡಿಕೊಂಡಿದ್ದೇನೆ, ನಟಿಯ ಜೊತೆ ಮಾತುಕತೆ ನಡೆಸಿ ಇಲ್ಲಿ ಬಂದು ಹೋಗುವುದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಅವರ ಹಲವು ಚಿತ್ರಗಳನ್ನು ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ಶಾರುಖ್ ಅವರು ಈ ಮಾತನ್ನು ಹೇಳಿದ್ದಾರೆ. 1998ರಲ್ಲಿ ಶಾರುಖ್ ಖಾನ್ ನಟಿಸಿದ ‘ದಿಲ್ ಸೇ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶಾರುಖ್ ನಟಿ ಮನೀಷಾ ಕೊಯಿರಾಲಾ ಅವರನ್ನು ಮೊದಲು ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡುತ್ತಾರೆ. ಈ ವೇಳೆ ಅವರಿಗೆ ಮನೀಷಾ ಅವರ ಮೇಲೆ ಪ್ರೀತಿ ಆಗುತ್ತದೆ.

ಇದಾದ ಬಳಿಕ 2013ರಲ್ಲಿ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರದಲ್ಲಿ ಶಾರುಖ್ ರೈಲ್ವೆ ನಿಲ್ದಾಣದಲ್ಲಿಯೇ ನಟಿ ದೀಪಿಕಾ ಪಡುಕೋಣೆ ಅವರನ್ನು ಭೇಟಿ ಮಾಡುತ್ತಾರೆ. ಈ ಚಿತ್ರದ ಹಲವು ಭಾಗಗಳನ್ನು ರೈಲಿನಲ್ಲೇ ಚಿತ್ರೀಕರಿಸಲಾಗಿದೆ. ಶಾರುಖ್ ಭಾರತ ಅಲ್ಲದೆ ವಿದೇಶಿ ರೈಲ್ವೆ ನಿಲ್ದಾಣದಲ್ಲೂ ಸಿನಿಮಾಗಳನ್ನು ಚಿತ್ರೀಕರಿಸಿದ್ದಾರೆ. ಸೂಪರ್ ಹಿಟ್ ‘ದಿಲ್‍ವಾಲೆ ದುಲ್ಹಾನೀಯಾ ಲೇ ಜಾಯೆಂಗೆ’ ಚಿತ್ರದಲ್ಲಿ ಯೂರೊಪ್‍ನಲ್ಲಿ ರಾಜ್ ಮಲ್ಹೋತ್ರಾ ಪಾತ್ರಧಾರಿ ಆಗಿದ್ದ ಶಾರುಖ್ ಅವರು ಸಿಮ್ರನ್ ಸಿಂಗ್ ಪಾತ್ರಧಾರಿಯ ಕಾಜೋಲ್ ಅವರನ್ನು ಭೇಟಿ ಮಾಡಿದ್ದರು.

Leave a Reply

Your email address will not be published. Required fields are marked *