ಸಿದ್ದಗಂಗಾ ಶ್ರೀಗಳ ಆಶೀರ್ವಾದದಿಂದಲೇ ಇಂದು ಉಪಮುಖ್ಯಮಂತ್ರಿಯಾಗಿದ್ದೇನೆ: ಪರಮೇಶ್ವರ್

3 Min Read

– ತುಮಕೂರಿನಲ್ಲಿ 20 ಸಾವಿರ ಎಕರೆ ಕೈಗಾರಿಕಾ ಹಬ್
– ತುಮಕೂರಿಗೆ ಮೆಟ್ರೋ ನನ್ನ ಕನಸು

ತುಮಕೂರು: ಸಿದ್ದಗಂಗಾ ಶ್ರೀಗಳ (Siddaganga Swamiji) ಆಶೀರ್ವಾದದಿಂದಲೇ ಇಂದು ಉಪಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದರು.

ನಗರದಲ್ಲಿ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬರಬೇಕೆಂದು ನಾನು ಮೊದಲಿನಿಂದಲೂ ನಿರ್ಧರಿಸಿರಲಿಲ್ಲ ಎಂದು ಹೇಳಿದರು. ರಾಜಕೀಯ ಪ್ರವೇಶಕ್ಕೂ ಮುನ್ನ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆ, ವಿದೇಶದಲ್ಲಿಯೂ ಕೆಲಸ ಮಾಡಿದ್ದೆ. ರಜೆ ಮೇಲೆ ಊರಿಗೆ ಬಂದಾಗ ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಸಂಸ್ಥೆಗಳನ್ನು ಮುಂದುವರಿಸುವಂತೆ ತಂದೆಯವರು ಸೂಚಿಸಿದ್ದರು. ಹಿರಿಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಊರಿನಲ್ಲೇ ಉಳಿದುಕೊಂಡೆ. ಬಳಿಕ ರಾಜಕೀಯ ಪ್ರವೇಶಿಸುವ ಸಂದರ್ಭ ಎದುರಾಯಿತು. 1989ರಲ್ಲಿ ಮಧುಗಿರಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಬಾರಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಪ್ರಸ್ತುತ ಎರಡನೇ ಬಾರಿಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ತಮ್ಮ ರಾಜಕೀಯ ಪಯಣವನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಎಲ್ಲಾ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸ್ತೀವಿ: ಯುಪಿ ಚುನಾವಣಾ ಕಣಕ್ಕೆ ಮಾಜಿ ಐಎಎಸ್ ಅಧಿಕಾರಿ

ನಾನು ಚಿಕ್ಕವನಿದ್ದಾಗಲೇ ತಂದೆಯವರು ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಶಿವಕುಮಾರ ಶ್ರೀಗಳ ಆಶೀರ್ವಾದ ಕೊಡಿಸಿದ್ದರು. ಶ್ರೀಗಳ ಆಶೀರ್ವಾದ ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಅಧಿಕಾರ ಶಾಶ್ವತವಲ್ಲ, ಅಧಿಕಾರದಲ್ಲಿದ್ದಾಗ ಜನರಿಗೆ ಮತ್ತು ನಾಡಿಗೆ ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಕಬ್ಬು ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿಗಳ ಕಪಟ ನಾಟಕ: ವಿಜಯೇಂದ್ರ ಕಿಡಿ

ತುಮಕೂರಿನಲ್ಲಿ 20 ಸಾವಿರ ಎಕರೆ ಕೈಗಾರಿಕಾ ಹಬ್:
ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ನನ್ನ ಆಶಯ. ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ. ತುಮಕೂರನ್ನು ಏಷ್ಯಾದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ ಎಂದರು. ಇದನ್ನೂ ಓದಿ:3,000 ಮಹಿಳಾ ಫ್ಯಾನ್ಸ್‌ ಭೇಟಿಯಾಗಲಿದ್ದಾರೆ ಧನುಷ್‌ – ʻಬಿಜೆಪಿಯ ಆಪರೇಷನ್ ಡಿʼ ಅಂತಾ ಕಾಂಗ್ರೆಸ್ ಆರೋಪ

ಕೈಗಾರಿಕಾ ಹೂಡಿಕೆಗಾಗಿ ಉದ್ಯಮಿಗಳಿಂದ ಬೇಡಿಕೆ ಹೆಚ್ಚಾಗಿದೆ. 500ರಿಂದ ಒಂದು ಸಾವಿರ ಎಕರೆವರೆಗೆ ಭೂಮಿ ಒದಗಿಸುವಂತೆ ಉದ್ಯಮಿಗಳು ಮನವಿ ಮಾಡುತ್ತಿದ್ದಾರೆ. ಗ್ರೀನ್ ಹೈಡ್ರೋಜನ್ ಘಟಕ, ಡೇಟಾ ಸೆಂಟರ್ ಸ್ಥಾಪನೆಗೆ 80 ಸಾವಿರ ಕೋಟಿ ಹೂಡಿಕೆ ಪ್ರಸ್ತಾಪ ಬಂದಿದ್ದು, 2 ಸಾವಿರ ಎಕರೆ ಭೂಮಿ ಒದಗಿಸುವಂತೆ ಬೇಡಿಕೆ ಬಂದಿದೆ. ಟೊಯೋಟಾ ಕಂಪನಿ ಪ್ರತಿನಿಧಿಗಳು ತುಮಕೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಮಾರು 300 ಎಕರೆ ಭೂಮಿಗೆ ಬೇಡಿಕೆ ಇಟ್ಟಿದ್ದಾರೆ. ಜಪಾನೀಸ್ ಟೌನ್‌ಶಿಪ್ ಸ್ಥಾಪನೆಗಾಗಿ ಈಗಾಗಲೇ 500 ಎಕರೆ ಭೂಮಿ ಒದಗಿಸಲಾಗಿದೆ. ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗಾವಕಾಶ ಹೆಚ್ಚಳ ಹಾಗೂ ತುಮಕೂರಿನ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಏನ್ ಚಿನ್ನ.. ಮನೆಯವರಿಗೆ ತಲುಪಿಸಿ ಅಂದಿದ್ನಲ್ಲ ಅಂತ ದರ್ಶನ್ ಹೇಳಿದ್ರೂ ಧನ್ವೀರ್ ಹಣ ಕೊಟ್ಟಿಲ್ಲ: ವೇಲು ನಾಯ್ಕರ್

ತುಮಕೂರಿಗೆ ಮೆಟ್ರೋ ನನ್ನ ಕನಸು:
ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ನನ್ನ ಪ್ರಮುಖ ಆಶಯ. ಕಳೆದ ಐದಾರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದೇನೆ. ಮೆಟ್ರೋ ಯೋಜನೆಯ ಡೀಟೇಲ್ಡ್ ಫೀಸಿಬಿಲಿಟಿ ಸ್ಟಡಿ ಪೂರ್ಣಗೊಂಡಿದ್ದು, ಡಿಪಿಆರ್ ಕೂಡ ಸಿದ್ಧವಾಗಿದೆ. ಮೆಟ್ರೋ ಯೋಜನೆಗೆ ಆಸಕ್ತ ಸಂಸ್ಥೆಗಳಿಂದ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ ಕರೆಯಲು ತಯಾರಾಗಿದ್ದೇವೆ. ಮೆಟ್ರೋ ಸಂಪರ್ಕ ಸಾಕಾರಗೊಂಡರೆ ಬೆಂಗಳೂರು ಹಾಗೂ ತುಮಕೂರು ನಡುವಿನ ಸಂಪರ್ಕ ಮತ್ತು ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ. ನನ್ನ ಅಧಿಕಾರಾವಧಿಯಲ್ಲಿ ತುಮಕೂರಿನ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೊಡುಗೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ದೀಪಾವಳಿಗೆ `ವೋಕಲ್ ಫಾರ್ ಲೋಕಲ್’ ಅಭಿಯಾನ ಬಲಪಡಿಸಿ: ಪ್ರಧಾನಿ ಮೋದಿ ಕರೆ

Share This Article
Exit mobile version