Friday, 20th September 2019

‘ಕ್ಯಾಟ್’ ಕೊರಳಿಗೆ ಘಂಟೆ ಕಟ್ಟೋವರ‌್ಯಾರು? ಕತ್ರೀನಾ ನೀಡಿದ್ರು ಉತ್ತರ

ಮುಂಬೈ: ಬಾಲಿವುಡ್ ಸೆಕ್ಸಿ ಗರ್ಲ್ ಕತ್ರಿನಾ ಕೈಫ್ ತಮ್ಮ ಮದುವೆ ವಿಷಯವನ್ನು ರಿವೀಲ್ ಮಾಡಿದ್ದಾರೆ. ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ವೇಳೆ ನಾನು ಶೀಘ್ರದಲ್ಲಿಯೇ ಮದುವೆ ಆಗುತ್ತೇನೆ. ನನಗೂ ಮಕ್ಕಳು ಆಗುತ್ತೇವೆ, ಅವುಗಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿರಲು ಇಷ್ಟಪಡುತ್ತೇನೆಂದು ತಿಳಿಸಿದ್ದಾರೆ.

ಯಾರನ್ನು, ಯಾವಾಗ ಮದುವೆ ಆಗುತ್ತೇನೆ ಎಂಬುವುದು ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆ ಆಗುತ್ತೇನೆ. ನನ್ನ ಹೆಸರಿನ ಮೊದಲು ಕ್ಯಾಟ್ (ಬೆಕ್ಕು) ಅಂತಿದೆ. ಹಾಗಾಗಿ ನನ್ನ ಕೊರಳಿಗೆ ಘಂಟೆ ಕಟ್ಟುವ ವ್ಯಕ್ತಿ ಯಾರೆಂದು ಸ್ನೇಹಿತರು ಮಾತನಾಡುತ್ತಾರೆ ಎಂದು ಹೇಳಿ ಮುಗಳ್ನಕ್ಕರು.

ಬಾಲಿವುಡ್ ನಲ್ಲಿ ತಮ್ಮ ಮೋಹಕ ಮೈಮಾಟದ ಮೂಲಕವೇ ಹೆಸರು ಮಾಡಿದ ಕತ್ರಿನಾ ಅವರ ಸಿನಿ ಕೆರಿಯರ್ ಆರಂಭದಿಂದಲೂ ಕೆಲ ನಾಯಕರ ಜೊತೆ ತುಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನೇ ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಬ್ರೇಕಪ್ ಮಾಡಿಕೊಂಡಿದ್ದರು.

ಈ ಎಲ್ಲ ಘಟನೆಗಳಿಂದ ನೊಂದಿದ್ದ ಕತ್ರಿನಾ ಲೈಫ್ ಎಂಟ್ರಿ ಕೊಟ್ಟಿದ್ದು ಚಾಕ್ಲೇಟ್ ಹೀರೋ ರಣ್‍ಬೀರ್ ಕಪೂರ್. ಸಿನಿಮಾದಲ್ಲಿ ಜೊತೆಯಾಗಿದ್ದ ರಣ್‍ಬೀರ್ ಸದ್ದಿಲ್ಲದೇ ಕತ್ರಿನಾಗೆ ಹತ್ತಿರವಾಗುತ್ತಾ ಹೋದರು. ಇಬ್ಬರು ಜೊತೆಯಾಗಿ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸತೊಡಗಿದರು. ಕತ್ರಿನಾ ಮತ್ತು ರಣ್‍ಬೀರ್ ವಿದೇಶ ಪ್ರವಾಸದಲ್ಲಿ ಮೋಜಿನಲ್ಲಿ ತೊಡಗಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.

ಕೆಲವು ದಿನಗಳ ನಂತರ ನಾವಿಬ್ಬರು ಬೇರೆಯಾಗಿದ್ದೇವೆ ಎಂಬ ಸಂದೇಶವನ್ನು ಈ ಜೋಡಿ ಪರೋಕ್ಷವಾಗಿ ಹೊರಹಾಕಿತ್ತು. ಕತ್ರಿನಾಳಿಂದ ದೂರವಾದ ರಣ್‍ಬೀರ್ ಇದೀಗ ಆಲಿಯಾ ಭಟ್ ಜೊತೆ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯೊಂದು ಬಾಲಿವುಡ್ ಲೋಕದಲ್ಲಿ ಸದ್ಯ ಹರಿದಾಡುತ್ತಿದೆ.

Leave a Reply

Your email address will not be published. Required fields are marked *