Connect with us

ಪ್ರಧಾನಿಗಳನ್ನ ಭೇಟಿಯಾಗಿದ್ದು, ನವಾಜ್ ಶರೀಫ್‍ರನಲ್ಲ: ಸಿಎಂ ಠಾಕ್ರೆ

ಪ್ರಧಾನಿಗಳನ್ನ ಭೇಟಿಯಾಗಿದ್ದು, ನವಾಜ್ ಶರೀಫ್‍ರನಲ್ಲ: ಸಿಎಂ ಠಾಕ್ರೆ

ನವ ದೆಹಲಿ: ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದೇನೆ, ಹೊರತು ನವಾಜ್ ಶರೀಫ್ ರನಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೊರೊನಾ ಸಂಕಷ್ಟದ ನಡುವೆ ಇಂದು ಪ್ರಧಾನಿಗಳನ್ನು ಸಿಎಂ ಉದ್ಧವ್ ಠಾಕ್ರೆ ಭೇಟಿಯಾದರು. ಭೇಟಿ ವೇಳೆ ಕರೊನಾ ನಿರ್ವಹಣೆ, ಲಸಿಕಾಕರಣ ಮತ್ತು ಮರಾಠ ಆರಕ್ಷಣ ಕುರಿತು ಚರ್ಚೆ ನಡೆದಿದೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಸಿಎಂ ಉದ್ಧವ್ ಠಾಕ್ರೆ ಮಾತನಾಡಿದರು. ಈ ವೇಳೆ ದಿಢೀರ್ ಭೇಟಿಗೆ ಕಾರಣ ಏನು ಪ್ರಶ್ನೆಗೆ ಉತ್ತರಿಸಿದ ಸಿಎಂ ಠಾಕ್ರೆ, ನಾನು ನಮ್ಮ ಪ್ರಧಾನಿಗಳನ್ನ ಭೇಟಿಯಾಗಿದ್ದೇನೆಯೇ ಹೊರತು ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್ ಶರೀಫ್ ಅವರನಲ್ಲ ಎಂದು ಉತ್ತರಿಸಿದರು.

ರಾಜಕೀಯ ಹೊರತಾಗಿಯೂ ಪ್ರಧಾನಿಗಳ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ನಾನು ಖಾಸಗಿಯಾಗಿ ಪ್ರಧಾನಿಗಳನ್ನ ಭೇಟಿಯಾದ್ರೆ ಏನು ತಪ್ಪು? ನಮ್ಮಿಬ್ಬರ ಮಧ್ಯೆ ಪನ್ ಟ ಒನ್ ಮೀಟಿಂಗ್ ನಡೆದಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜನತೆಗೆ ಲಸಿಕೆ ನೀಡುವ ಅಭಿಯಾನಕ್ಕೆ ವೇಗ ನೀಡಬೇಕಿದೆ. ಕೇಂದ್ರವೇ ಉಚಿತ ಲಸಿಕೆ ನೀಡಲು ಮುಂದಾಗಿರೋದನ್ನ ಸ್ವಾಗತಿಸುತ್ತೇವೆ. ಈ ಮೊದಲು ರಾಜ್ಯಗಳಿಗೆ ಈ ಜವಾಬ್ದಾರಿ ನೀಡಿದ್ದಾಗ, ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ 18 ರಿಂದ 44 ವರ್ಷದೊಳಗಿರುವ ಜನರ ಸಂಖ್ಯೆ 6 ಕೋಟಿಗೂ ಹೆಚ್ಚಿದೆ. ನಮಗೆ ಸದ್ಯ 12 ಕೋಟಿ ಡೋಸ್ ಬೇಕಿದ್ದು, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚನೆ ಮಾಡಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಜಗಜ್ಜಾಹೀರು ಆಗಿತ್ತು. ಕೇಂದ್ರದ ನಡೆ ಪ್ರಶ್ನಿಸಿ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿತ್ತು.

Advertisement
Advertisement