
ಹೈದರಾಬಾದ್: ಪ್ರಧಾನಿ ಮೋದಿ ವಿರುದ್ಧ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ಕಾನೂನು ವಿದ್ಯಾರ್ಥಿಯನ್ನ ಪೊಲೀಸರು ಭಾನುವಾರದಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisements
ಬಂಜಾರಾ ಜಿಲ್ಸ್ ನಿವಾಸಿಯಾದ 21 ವರ್ಷದ ವಿದ್ಯಾರ್ಥಿ ಆರಿಫ್ ಮೊಹಮ್ಮದ್ನನ್ನು ವಶಕ್ಕೆ ಪಡೆದ ಪೊಲೀಸರು 17 ಗಂಟೆಗಳವರೆಗೆ ವಿಚಾರಣೆ ಮಾಡಿದ್ದಾರೆ. ಆರಿಫ್ ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಮೆಹ್ದಿಪಟ್ನಂನ ಗುಡಿಮಲ್ಕಾಪುರ್ನಲ್ಲಿ ಸಮಾರಂಭಕ್ಕೆ ಹೋಗುವಾಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.
Advertisements
ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಹಾಗೂ ದೀಪಿಕಾ ಪಡುಕೋಣೆಯ ತಲೆ ಕಡಿದವರಿಗೆ ಬಿಜೆಪಿ ಮುಖಂಡರು ಹಾಗು ಇತರೆ ಸಂಘಟನೆಯವರು ಬಹುಮಾನ ಘೋಷಿಸಿದ್ದಕ್ಕೆ ಪ್ರತಿಯಾಗಿ ಈ ಪೋಸ್ಟ್ ಹಾಕಲಾಗಿತ್ತು.
ಗಾಚಿಬೌಲಿ ಪೊಲೀಸ್ ಠಾಣೆಯಲ್ಲಿ ಆರಿಫ್ನನ್ನು ಸುದೀರ್ಘ ವಿಚಾರಣೆ ನಡೆಸಲಾಗಿದೆ. ಆರಿಫ್ ಪೋಸ್ಟ್ ಹಂಚಿಕೊಂಡಿದ್ದಾನೆ ಹೊರತು ಆತನೇ ಬರೆದಿಲ್ಲ ಎಂಬುದು ಸ್ಪಷ್ಟವಾದ ನಂತರ ಆತನನ್ನು ಬಿಟ್ಟು ಕಳಿಸಲಾಗಿದೆ.
Advertisements
Advertisements