Karnataka
ವೃದ್ಧೆಗೆ ಮನೆ ನಿರ್ಮಸಿಕೊಟ್ಟು ಮೆಚ್ಚುಗೆಗೆ ಪಾತ್ರವಾದ ಎಸ್ಐ

ಹೈದರಾಬಾದ್: ಎಸ್ಐ ಅಧಿಕಾರಿಯೊಬ್ಬರು ನಿರ್ಗತಿಕ ವೃದ್ಧೆಗೆ ಹೊಸ ಮನೆಯನ್ನು ನಿರ್ಮಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಪೊಲೀಸ್ರಲ್ಲಿ ಮಾನವೀಯತೆ ಇದೆ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ ಎಂಬುದುನ್ನು ಎಸ್ಐ ಗುಂದ್ರಥಿ ಸತೀಶ್ ಅವರು ಸಾಬೀತು ಮಾಡಿದ್ದಾರೆ.
ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರ್ಗತಿಕಳಾಗಿದ್ದ ವಾರಾಂಗಲ್ ಜಿಲ್ಲೆಯ ಲಕ್ಷ್ಮಿನಾರಾಯಣಪುರಂ ಗ್ರಾಮದ ವೃದ್ಧ ಮಹಿಳೆಯೊಬ್ಬರಿಗೆ, ಎಸ್ಐ ಸತೀಶ್ ತಮ್ಮದೇ ಹಣದಲ್ಲಿ ಪುಟ್ಟದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ರಾಜಮ್ಮ(70)ನನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಮಗ ಅಂಗವಿಕಲರಾಗಿದ್ದರು ತಾಯಿಯನ್ನು ನೋಡಿಕೊಳ್ಳದೆ ಆಕೆಯನ್ನು ತೊರೆದಿದ್ದಾನೆ. ಹೀಗಿರುವಾಗ ರಾಜಮ್ಮ ಒಬ್ಬಳೇ ಪುಟ್ಟ ಮನೆಯಲ್ಲಿ ವಾಸವಾಗಿದ್ದಳು. ಇದು ಎಸ್ಐ ಸತೀಶ್ ಅವರ ಗಮನಕ್ಕೆ ಬಂದಿದೆ.
ರಾಜಮ್ಮಳನ್ನು ಭೇಟಿ ಮಾಡಿ ಹೊಸ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ದಾನಿಗಳ ಸಹಾಯದಿಂದ ಹಾಗೂ ಅರ್ಧ ತಮ್ಮ ಹಣದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸುಮಾರು 1,60,000 ರೂಪಾಯಿ ಹಣದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.
#WarangalPolice #Palakurthy SI Gundrathi Satish build a house for the old woman as New year’s gift which collapsed during rains in monsoon. @cpwrlc pic.twitter.com/uYRxJNJa1n
— Telangana State Police (@TelanganaCOPs) January 1, 2021
ರಾಜಮ್ಮ ಅವರ ಪರಿಸ್ಥಿತಿ ಕಂಡು ನನಗೆ ನೋವಾಯಿತು. ಅವರಿಗೆ ಎನನ್ನಾದರೂ ಸಹಾಯ ಮಾಡಬೇಕು ಯೋಚಿಸಿದೆ. ನನ್ನಿಂದ ಸಾಧ್ಯವಾಗಿರುವ ಪುಟ್ಟ ಸಹಾಯವನ್ನು ನಾನು ಮಾಡಿದ್ದೇನೆ. ದಾನಿಗಳ ಸಹಾಯ ಮತ್ತು ನನ್ನ ಹಣವನ್ನು ಸೇರಿಸಿ ಒಂದು ಮನೆ ನಿರ್ಮಿಸಿಕೊಟ್ಟಿದ್ದೇನೆ ಎಂದು ಎಸ್ಐ ಸತೀಶ್ ಅವರು ಹೇಳಿದ್ದಾರೆ.
ಎಸ್ಐ ಸತೀಶ್ ಅವರು ಅನೇಕ ವರ್ಷಗಳಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರು ಮಾಡಿರುವ ಸಹಾಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
