Connect with us

Crime

ಪಾಸ್‍ಪೋರ್ಟ್ ದಂಧೆ – 6 ಮಂದಿ ಅರೆಸ್ಟ್

Published

on

ಹೈದರಾಬಾದ್: ತೆಲಂಗಾಣದ ನಿಜಮಬಾದ್‍ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪಾರ್ಸ್‍ಪೋರ್ಟ್ ತಯಾರಿಸುತ್ತಿದ್ದ ಗ್ಯಾಂಗ್ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ನಕಲಿ ಪಾರ್ಸ್‍ಪೋರ್ಟ್ ತಯಾರಿಸುವ ದಂಧೆಯಲ್ಲಿ ಓರ್ವ ಬಾಂಗ್ಲದೇಶದ ಪ್ರಜೆಯು ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದ್ದು, ಇಲ್ಲಿಯವರೆಗೂ ಯಾರಿಗೆ ಪಾಸ್‍ಪೋರ್ಟ್‍ಗಳು ದೊರೆತಿವೆ ಹಾಗೂ ಈ ದಂಧೆಯಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮುನ್ನ ನಿಜಾಮಾಬಾದ್‍ನ ಬಿಜೆಪಿ ಮುಖಂಡ ಮತ್ತು ಪಕ್ಷದ ಸಂಸದ ಧರ್ಮಪುರಿ ಅರವಿಂದ, ನಿಜಾಮಾಬಾದ್ ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಪಾಸ್‍ಪೋರ್ಟ್‍ಗಳನ್ನು ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *