Connect with us

Crime

ಅಮೆರಿಕದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನ ಚಾಕುವಿನಿಂದ ಇರಿದು ಕೊಂದ್ರು!

Published

on

– ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
– ಸಹಾಯಕ್ಕಾಗಿ ಸರ್ಕಾರದ ಮೊರೆ ಹೋದ ಪತ್ನಿ

ಹೈದರಾಬಾದ್: ಕೆಲಸಕ್ಕೆಂದು ಅಮೆರಕಕ್ಕೆ ತೆರಳಿ ಅಲ್ಲಿ ಪಾಲುದಾರಿಕೆಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಈ ಘಟನೆ ಅಮೆರಿಕದ ಜಾರ್ಜಿಯಾ ಎಂಬಲ್ಲಿ ಭಾನುವಾರ ನಡೆದಿದೆ. ಮೃತ ದುರ್ದೈವಿಯನ್ನು ಮೊಹಮ್ಮದ್ ಆರಿಫ್ ಮೊಹಿಯುದ್ದೀನ್(37) ಎಂದು ಗುರುತಿಸಲಾಗಿದೆ. ಈತ ಮೂಲತಃ ಹೈದರಾಬಾದ್ ನವನಾಗಿದ್ದು, ಕಳೆದ 10 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದನು.

ಜಾರ್ಜಿಯಾದಲ್ಲಿ ಪಾಲುದಾರಿಕೆಯಲ್ಲಿ ಆರಿಫ್ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇದೀಗ ಮನೆಯ ಆವರಣದಲ್ಲಿಯೇ ದುಷ್ಕರ್ಮಿಗಳು ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಅಂಗಡಿಯ ಉದ್ಯೋಗಿ ಕೂಡ ಕೃತ್ಯದಲ್ಲಿ ಪಾಲುದಾರರಾಗಿರುವುದಾಗಿ ಆರಿಫ್ ಕುಟುಂಬ ಆರೋಪಿಸಿದೆ.

ನನಗೆ ಮತ್ತು ನನ್ನ ತಂದೆಗೆ ತುರ್ತು ವೀಸಾದ ಮೂಲಕ ಅಮೆರಿಕ್ಕೆ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಿಕೊಡಿ. ಈ ಅವಕಾಶ ಕೊಟ್ಟರೆ ಪತಿಯ ಅಂತ್ಯಸಂಸ್ಕಾರವನ್ನು ಅಲ್ಲಿಯೇ ನಡೆಸುತ್ತೇವೆ ಎಂದು ಆರಿಫ್ ಪತ್ನಿ ಮೆಹ್ನಾಜ್ ಫಾತಿಮಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಭಾನುವಾರ 9 ಗಂಟೆಯ ಸುಮಾರಿಗೆ ನಾನು ಪತಿ ಜೊತೆ ಮಾತನಾಡಿದ್ದೇನೆ. ಆಗ ಆತ ಅರ್ಧ ಗಂಟೆ ಬಿಟ್ಟು ಮನೆಗೆ ಹೋಗಿ ನಂತರ ಕರೆ ಮಾಡುವುದಾಗಿ ತಿಳಿಸಿದ್ದ. ಆದರೆ ಅರ್ಧ ಗಂಟೆಯ ಬಳಿಕ ಆತನಿಂದ ನನಗೆ ಯಾವುದೇ ಕರೆ ಬಂದಿರಲಿಲ್ಲ. ಕೆಲ ಹೊತ್ತಿನ ಬಳಿಕ ನಾದಿನಿಯಿಂದಾಗಿ ನನಗೆ ವಿಚಾರ ತಿಳಿಯಿತು. ಆಕೆ ನನ್ನ ಪತಿಯನ್ನು ದುಷ್ಕರ್ಮಿಗಳು ಕೊಲೆಗೈದಿರುವುದಾಗಿ ತಿಳಿಸಿದಳು. ಸದ್ಯ ಪತಿ ಶವ ಜಾರ್ಜಿಯಾ ಆಸ್ಪತ್ರೆಯಲ್ಲಿದ್ದು, ಅಲ್ಲಿ ನಮ್ಮ ಕುಟುಂಬಸ್ಥರು ಯಾರೂ ಇಲ್ಲ ಎಂದು ಫಾತಿಮಾ ಬೇಸರ ವ್ಯಕ್ತಪಡಿಸಿದರು.

ತೆಲಂಗಾಣದ ಎಂಬಿಟಿ ಪಕ್ಷದ ವಕ್ತಾರ ಉಲ್ಲಾ ಖಾನ್ ಅವರಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಕಚೇರಿಗೆ ಆರಿಫ್ ಕುಟುಂಬದ ಪರವಾಗಿ ಪತ್ರ ಬರೆದಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in