Tuesday, 18th June 2019

ಚಾಕ್ಲೇಟ್ ಆಸೆ ತೋರಿಸಿ ಶಾಲಾ ಸಿಬ್ಬಂದಿಯಿಂದಲೇ ಯುಕೆಜಿ ವಿದ್ಯಾರ್ಥಿನಿ ರೇಪ್!

ಹೈದರಾಬಾದ್: ಚಾಕ್ಲೇಟ್ ನೀಡುವುದಾಗಿ ಹೇಳಿ ಐದು ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಶಾಲೆ ಆವರಣದಲ್ಲಿಯೇ ಅತ್ಯಾಚಾರ ಎಸಗಿದ ಅಮಾವನೀಯ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಶನಿವಾರ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ಚಾಕ್ಲೇಟ್ ನೀಡುತ್ತೇನೆ ಎಂದು ಹೇಳಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದ ಮಗಳನ್ನು ಶಾಲೆಯ ಸಿಬ್ಬಂದಿಯೊಬ್ಬ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆವರಣದಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಗೆ ನುಗ್ಗಿ, ಪೀಠೋಪಕರಣ, ಕಟ್ಟದ ಸೇರಿದಂತೆ ವಿವಿಧ ವಸ್ತುಗಳನ್ನು ದ್ವಂಸಗೊಳಿಸಿದ್ದಾರೆ. ಗಲಾಟೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತು ಪೋಕ್ಸೋ ಕಾಯ್ದೆ ಅಡಿ ಗೋಲ್ಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

One thought on “ಚಾಕ್ಲೇಟ್ ಆಸೆ ತೋರಿಸಿ ಶಾಲಾ ಸಿಬ್ಬಂದಿಯಿಂದಲೇ ಯುಕೆಜಿ ವಿದ್ಯಾರ್ಥಿನಿ ರೇಪ್!

Leave a Reply

Your email address will not be published. Required fields are marked *