Monday, 20th August 2018

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ- ನಡುರಸ್ತೆಯಲ್ಲೇ ಇಳಿದು ಓಡಿದ ಪತಿ-ಪತ್ನಿ!

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದಿದೆ.

ಕುಂದಾಪುರದ ಕಾರ್ತಿಕ್ ಎಂಬವರು ತಮ್ಮ ಐ20 ಕಾರಲ್ಲಿ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಕಾಣಿಸಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರ್ತಿಕ್ ಮತ್ತು ಅವರ ಪತ್ನಿ ನಡುರಸ್ತೆಯಲ್ಲೇ ಕೆಳಗಿಳಿದಿದ್ದಾರೆ.

ಕಾರಿನೊಳಗಿದ್ದ ಪತಿ-ಪತ್ನಿ ನಡುರಸ್ತೆಯಲ್ಲಿ ಕಾರು ಬಿಟ್ಟು ಓಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಕೆಲ ಹೊತ್ತಲ್ಲೇ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದೆ. ಕೂಡಲೇ ಬೆಂಕಿ ನಂದಿಸಿದ್ದು, ಕಾರು ಸುಟ್ಟು ಕರಕಲಾಗಿತ್ತು. ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *