Saturday, 14th December 2019

Recent News

ಖಾಸಗಿ ವಿಡಿಯೋ ಇಟ್ಕೊಂಡು ಬೆದರಿಕೆ – ಬದುಕಿದ್ರೆ ತಾನೇ ವಿಡಿಯೋ ಹೊರಕ್ಕೆ ಬರೋದು ಎಂದು ಕೊಲೆ

– ಆರು ವರ್ಷಗಳ ಹಿಂದಿನ ಕಾರಣಕ್ಕೆ ಈಗ ಹತ್ಯೆ

ಬೆಂಗಳೂರು: ಖಾಸಗಿ ವಿಡಿಯೋ ಇಟ್ಟುಕೊಂಡು 6 ವರ್ಷಗಳಿಂದ ಬ್ಯ್ಲಾಕ್‍ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಪತಿ-ಪತ್ನಿ ಸೇರಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದಿದೆ.

ಮಂಜು ಮತ್ತು ಸಾವಿತ್ರಿ ಕೊಲೆ ಮಾಡಿದ ದಂಪತಿ. ಮೃತಪಟ್ಟ ವ್ಯಕ್ತಿ ಸಂತೋಷ್ ದಂಪತಿಯ ಖಾಸಗಿ ವಿಡಿಯೋ ಹೊಂದಿದ್ದನು. ಅಲ್ಲದೆ ಈ ವಿಡಿಯೋ ಹೊರಗಿನ ಪ್ರಪಂಚಕ್ಕೆ ತೋರಿಸುವುದಾಗಿ ಬೆದರಿಕೆ ಹಾಕಿ ಹಣ ಪೀಕುತ್ತಿದ್ದನು. ಕೊಲೆ ನಡೆದ ಹಿಂದಿನ ದಿನವೂ ಸಂತೋಷ್ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದನು.

ಬೆದರಿಕೆಯಿಂದ ಬೇಸತ್ತ ದಂಪತಿ ಆತನನ್ನು ಕೊಲೆ ಮಾಡಲು ನಿರ್ಧರಿಸುತ್ತಾರೆ. ವಿಡಿಯೋ ಹೊರಗೆ ಬಂದರೆ ಮರ್ಯಾದೆ ಹೋಗುತ್ತೆ. ಅವನು ಬದುಕಿದ್ದರೆ ತಾನೇ ವಿಡಿಯೋ ಹೊರಕ್ಕೆ ಬರುವುದು, ಅವನನ್ನೇ ಸಾಯಿಸಿದರೆ ಸಾವಿನ ಜೊತೆ ವಿಡಿಯೋ ಕೂಡ ನಾಶವಾಗುತ್ತೆ ಎಂದು ಪತಿ- ಪತ್ನಿ ಸೇರಿ ಕೊಲೆ ಮಾಡಿದ್ದಾರೆ.

ಲಗ್ಗರೆ ಬಳಿಯ ಮೌವಂಟ್ ಸೆನೆರಿಯೊ ಸ್ಕೂಲ್ ಬಳಿ ಕೊಲೆ ನಡೆದಿದ್ದು, ನವೆಂಬರ್ 15ರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷಗಳ ಹಿಂದಿನ ಕಾರಣಕ್ಕೆ ಈಗ ಕೊಲೆ ನಡೆದಿದೆ. ಆರು ವರ್ಷಗಳಿಂದ ಮೃತ ಸಂತೋಷ್ ಆರೋಪಿಗಳ ಖಾಸಗಿ ವಿಡಿಯೋ ಹೊಂದಿದ್ದನು.

ಸದ್ಯ ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *