Connect with us

Crime

ಬಾಯ್‍ಫ್ರೆಂಡ್ ಜೊತೆ ಟೆಕ್ಕಿ ಪತಿ ಸೆಕ್ಸ್ – ಮದ್ವೆಯಾದ 4 ವರ್ಷದ ನಂತ್ರ ರಹಸ್ಯ ಬಯಲು

Published

on

– ಶಬ್ದ ಕೇಳಿ ಕಿಟಕಿಯಿಂದ ನೋಡಿ ಪತ್ನಿ ಶಾಕ್
– ಮದ್ವೆಯಾದಗಿನಿಂದ ಪತ್ನಿಯ ಜೊತೆ ಸಂಬಂಧ ಹೊಂದಿಲ್ಲ

ರಾಯ್ಪುರ್: ಸಲಿಂಗಕಾಮಿ ಪತಿ ತನ್ನ ಬಾಯ್‍ಫ್ರೆಂಡ್ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಛತ್ತೀಸ್‍ಗಢದ ಭಿಲಾಯ್ ಪಟ್ಟಣದಲ್ಲಿ ನಡೆದಿದೆ.

ಮದುವೆಯಾಗಿ ನಾಲ್ಕು ವರ್ಷಗಳ ನಂತರ ತನ್ನ ಪತಿ ಸಲಿಂಗಕಾಮಿ ಎಂದು ತಿಳಿದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಛತ್ತೀಸ್‍ಗಢದ ಭಿಲಾಯ್ ಪಟ್ಟಣದ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಕಂಪನಿಯೊಂದರಲ್ಲಿ ಎಚ್‍ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದನು. ಆದರೆ ಪತಿ ಮದುವೆಯಾದಾಗಿನಿಂದ ಪತ್ನಿಯೊಂದಿಗೆ ಸಂಬಂಧ ಹೊಂದಿರಲಿಲ್ಲ. ಆದರೆ ಪತ್ನಿ ಕೆಲಸದ ಒತ್ತಡದಿಂದ ಪತಿ ನನ್ನಿಂದ ದೂರ ಇದ್ದಾರೆ ಎಂದು ತಾಳ್ಮೆಯಿಂದ ಕಾಯುತ್ತಿದ್ದಳು.

ನಾಲ್ಕು ದಿನಗಳ ಹಿಂದೆ ಪತ್ನಿ ಕೆಲಸ ಮುಗಿಸಿ ಮನೆಗೆ ಬಂದಿದ್ದಾಳೆ. ಆಗ ಮನೆಗೆ ಬೀಗ ಹಾಕಿತ್ತು. ಪತ್ನಿ ಮತ್ತೊಂದು ಕೀಯಿಂದ ಬಾಗಿಲು ತೆಗೆದು ಮನೆಗೆ ಹೋಗಿದ್ದಾಳೆ. ಆದರೆ ಮನೆಯೊಳಗೆ ಹೋದಾಗ ಮನೆಯಲ್ಲಿ ಯಾರೋ ಇರುವ ಬಗ್ಗೆ ಶಬ್ದ ಕೇಳಿದೆ.

ಈ ವೇಳೆ ಅನುಮಾನಗೊಂಡ ಪತ್ನಿ ಕಿಟಕಿಯಿಂದ ನೋಡಿದ್ದಾಳೆ. ಆಗ ಪತಿ ತನ್ನ ಬಾಯ್‍ಫ್ರೆಂಡ್ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ನೋಡಿದ್ದು, ಆಗ ತನ್ನ ಪತಿ ಸಲಿಂಗಕಾಮಿ ಎಂದು ಅರಿತುಕೊಂಡಿದ್ದಾಳೆ.

ಕೋಪಗೊಂಡ ಪತ್ನಿ ರೂಮಿಗೆ ಹೋಗಿ ಪತಿಯ ಜೊತೆಗೆ ಜಗಳ ಮಾಡಿದ್ದಾಳೆ. ಈ ವೇಳೆ ಪತಿ ಈ ವಿಚಾರವನ್ನು ಬೇರೆ ಯಾರಿಗೂ ಹೇಳಬಾರದು ಎಂದು ಹೊಡೆದಿದ್ದಾನೆ. ಅಲ್ಲದೇ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದ್ದಾನೆ. ಕೊನೆಗೆ ಪತ್ನಿ ಪೊಲೀಸರಿಗೆ ಫೋನ್ ಮಾಡಿ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಸದ್ಯಕ್ಕೆ ಪೊಲೀಸರು ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.