Tuesday, 21st May 2019

Recent News

ಗೆಳತಿ ಜೊತೆ ಸೇರಿ ಪತ್ನಿಯ ಕೊಲೆಗೈದ ಪತಿ!

ಹಾಸನ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಚಿಕ್ಕಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶ್ವೇತಾ ಅನುಮಾನಾಸ್ಪದವಾಗಿ ಮೃತಪಟ್ಟ ಮಹಿಳೆ. ಆಗಸ್ಟ್ 24ರಂದು ಶ್ವೇತಾಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ರವಿಶಂಕರ್ ಹಾಗೂ ಆತನ ಸ್ನೇಹಿತೆ ಸಂಧ್ಯಾಳೊಂದಿಗೆ ಸೇರಿ ಶ್ವೇತಾಳನ್ನು ಕೊಲೆ ಮಾಡಿದ್ದಾರೆಂದು ಮೃತಳ ಪೋಷಕರು ಆರೋಪಿಸಿದ್ದಾರೆ.

2000ರ ಇಸವಿ ಶ್ವೇತಾಳನ್ನು ವಕೀಲ ರವಿಶಂಕರ್ ಗೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರು ಸಂತೋಷವಾಗಿದ್ದರು. ಆದ್ರೆ ದಂಪತಿಗಳಿಗೆ ಮಕ್ಕಳಿರಲಿಲ್ಲ. ರವಿಶಂಕರ್ ಗೆ ಹೊಸಕೊಪ್ಪಲಿನ ಸಂಧ್ಯಾಳೊಂದಿಗೆ ಅಕ್ರಮ ಸಂಬಂಧವಿದ್ದು ಇಬ್ಬರು ಸೇರಿ ಶ್ವೇತಾಳನ್ನು ಕೊಲೆ ಮಾಡಿದ್ದಾರೆ ಎಂದು ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಕೊಂಡಿರುವ ಪೊಲೀಸರು ರವಿಶಂಕರ್‍ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಶ್ವೇತಾಳ ಕೊಲೆಯ ಪ್ರಮುಖ ಆರೋಪಿಯಾಗಿರುವ ಸಂಧ್ಯಾಳನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ಶ್ವೇತಾಳ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಕೆಯ ಪೋಷಕರು ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *