Connect with us

Latest

ಪ್ರಿಯತಮೆ ಜೊತೆ ತಗ್ಲಾಕೊಂಡ ಪತಿ- ಅರೆನಗ್ನವಾಗಿ ರಸ್ತೆಗೆ ಎಳೆದು ತಂದ ಪತ್ನಿ

Published

on

ಹೈದರಾಬಾದ್: ಪತಿಯೊಬ್ಬ ಅರೆ ನಗ್ನವಾಗಿ ತನ್ನ ಪ್ರೇಮಿಯ ಜೊತೆ ಬೆಡ್‍ರೂಮಿನಲ್ಲಿ ಇರುವಾಗಲೇ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ಅಲ್ವಾಲ್‍ನ ಸುಭಾಶ್ ನಗರದಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, ಆರೋಪಿ ಪತಿ ಗೋಪಾಲ್‍ಗೆ ಪತ್ನಿ ಮತ್ತು ಸಂಬಂಧಿಕರು ಧರ್ಮದೇಟು ಕೊಟ್ಟಿದ್ದಾರೆ. ಆರೋಪಿ ಗೋಪಾಲ್ ಏಳು ವರ್ಷಗಳ ಹಿಂದೆ ಎಸ್ತರ್ ಏಂಜಲ್‍ಳನ್ನು ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇತ್ತೀಚೆಗೆ ಪತಿ ಗೋಪಾಲ್ ಪತ್ನಿಯಿಂದ ದೂರವಿರುತ್ತಿದ್ದನು.

ಗೋಪಾಲ್ ಅದೇ ಪ್ರದೇಶದ ಇನ್ನೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಆಕೆಗಾಗಿ ಗೋಪಾಲ್ ಪತ್ನಿ ಮತ್ತು ಮಕ್ಕಳನ್ನು ನಿರ್ಲಕ್ಷ್ಯ ಮಾಡಿದ್ದನು. ದಿನ ಕಳೆದಂತೆ ಪತ್ನಿಗೆ ಗೋಪಾಲ್ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಅನುಮಾನ ಬಂದಿದೆ.

ಕುಟುಂಬಸ್ಥರು ಒಂದು ದಿನ ಮಹಿಳೆಯ ಮನೆಗೆ ಗೋಪಾಲ್ ಹೋಗುವುದನ್ನು ನೋಡಿ ಏಂಜಲ್‍ಗೆ ತಿಳಿಸಿದ್ದಾರೆ. ಇದರಿಂದ ಪತ್ನಿ ಕೋಪಗೊಂಡು ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದಳು. ಗೋಪಾಲ್ ಶನಿವಾರ ತನ್ನ ಲವ್ವರ್ ಮನೆಗೆ ಹೋಗಿದ್ದು, ಆಕೆಯೊಂದಿಗೆ ಬೆಡ್‍ರೂಮಿನಲ್ಲಿ ಅರೆನಗ್ನವಾಗಿ ಇದ್ದನು. ಇದನ್ನು ತಿಳಿದ ಪತ್ನಿ ತನ್ನ ಸಂಬಂಧಿಕರೊಂದಿಗೆ ಬಂದು ರೆಡ್ ಹ್ಯಾಂಡಾಗಿ ಪತಿಯನ್ನು ಹಿಡಿದಿದ್ದಾಳೆ.

ಪತಿಯನ್ನು ಮನೆಯಿಂದ ಅರೆನಗ್ನವಾಗಿಯೇ ರಸ್ತೆಗೆ ಎಳೆದುಕೊಂಡು ಬಂದು ಚಪ್ಪಲಿಯಲ್ಲಿ ಥಳಿಸಿದ್ದಾಳೆ. ಸಂಬಂಧಿಕರು ಕೂಡ ಗೋಪಾಲ್ ಮತ್ತು ಲವ್ವರ್ ಮೇಲೂ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯವನ್ನು ಸ್ಥಳದಲ್ಲಿದ್ದರು ರೆಕಾರ್ಡ್ ಮಾಡಿಕೊಂಡಿದ್ದು, ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.