Connect with us

Bengaluru City

ಓದಿಸ್ತೇನೆಂದು 19 ವರ್ಷದ ಯುವತಿಯ ವಿವಾಹವಾದ – ಈಗ ಡ್ರಗ್ಸ್ ತೆಗೆದುಕೊಳ್ಳುವಂತೆ ಕಿರುಕುಳ

Published

on

– ಡ್ರಗ್ಸ್ ವ್ಯಸನಿ ಟೆಕ್ಕಿ ಪತಿ ವಿರುದ್ಧ ಪತ್ನಿ ದೂರು
– ಮೊಬೈಲ್ ಮೇಲೆ ಕೊಕೆನ್ ಇಟ್ಟು ಹೇಗೆ ಎಳೆದು ತೋರಿಸಿದ

ಬೆಂಗಳೂರು: ಡ್ರಗ್ಸ್ ವ್ಯಸನಿಯೊಬ್ಬ ತನ್ನ ಪತ್ನಿಗೂ ಡ್ರಗ್ಸ್ ತೆಗೆದುಕೊಳ್ಳುವಂತೆ ಒತ್ತಡ ಹೇರಿ ಕಿರುಕುಳ ನೀಡಿ ವಿಕೃತವಾಗಿ ವರ್ತಿಸಿದ್ದು ಈ ಸಂಬಂಧ ಪತ್ನಿ ದೂರು ನೀಡಿದ್ದಾರೆ.

ಕೋರಮಂಗಲದ ನಿವಾಸಿಯಾಗಿರೋ ಲೋಹಿತ್ ಕೃಷ್ಣ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ. ಈತ ಐಟಿ ಕಂಪನಿ ಉದ್ಯೋಗಿಯಾಗಿದ್ದು, ತಂದೆ ಕೃಷ್ಣ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಒಳ್ಳೆಯ ಕೆಲಸದಲ್ಲಿ ಸಹ ಇದ್ದಾರೆ. ಆದರೆ ಅಪ್ಪ, ಅಮ್ಮ ಸಹ ಈ ಡ್ರಗ್ಸ್ ಚಟಕ್ಕೆ ಸಪೋರ್ಟ್ ಮಾಡುತ್ತಾರೆ. ಈ ಆಘಾತಕಾರಿ ವಿಚಾರವನ್ನು ಸ್ವತಃ ಲೋಹಿತ್ ಪತ್ನಿ ವಿಡಿಯೋ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.

ತಾನು ಮಾಡುವುದಲ್ಲದೆ ಪತ್ನಿಗೂ ಮಾತ್ರೆಗಳನ್ನು ನುಂಗಿಸಿ, ಬಲವಂತವಾಗಿ ಮದ್ಯ ಕುಡಿಸುತ್ತಿದ್ದನಂತೆ. ಈ ಕುರಿತು ಲೋಹಿತ್ ಪತ್ನಿ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇವನ ಡ್ರಗ್ ಚಟಕ್ಕೆ ಪತ್ನಿಯೇ ಸಾಕ್ಷಿಯಾಗಿದ್ದು, ಮೊಬೈಲ್ ಮೇಲೆ ಕೊಕೆನ್ ಇಟ್ಟು ಹೇಗೆ ಎಳಿಯಬೇಕು ಎಂದು ತೋರಿಸಿದ್ದಾನೆ. ಮಾತ್ರವಲ್ಲ ಇದು ಏನು ಎಂದು ಪತ್ನಿಗೆ ವಿವರಿಸಿದ್ದಾನೆ ಡ್ರಗ್ ಅಡಿಟ್ ಆಗಿರುವ ಲೋಹಿತ್. ಡ್ರಗ್ಸ್ ಸೇವಿಸುವುದನ್ನು ಪತ್ನಿ ಕೈಯ್ಯಲ್ಲಿ ವಿಡಿಯೋ ಮಾಡಿಸಿ ವಿಕೃತಿ ಮೆರೆದಿದ್ದಾನೆ. ಮಾತ್ರವಲ್ಲ ಈ ವಿಡಿಯೋವನ್ನು ನಾನೇ ಫೇಸ್ಬುಕ್‍ಗೆ ಹಾಕುತ್ತೇನೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾನೆ.

ಮಗನ ಈ ಕೃತ್ಯದ ಬಗ್ಗೆ ಸೊಸೆ ಅತ್ತೆ, ಮಾವನ ಬಳಿ ಹೇಳಿಕೊಂಡಿದ್ದಾರೆ. ಮಗನನ್ನು ಸರಿ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಪ್ರಯೋಜನವಾಗಿಲ್ಲ. ಮಗನ ಡ್ರಗ್ಸ್ ಚಟಕ್ಕೆ ಅಪ್ಪ, ಅಮ್ಮನೇ ಬೆಂಬಲ ನೀಡುತ್ತಿದ್ದಾರೆ. ಥಣಿಸಂದ್ರದ ನಿಗ್ರೋಗಳ ಬಳಿ ಲೋಹಿತ್ ಕೊಕೆನ್ ತರುತ್ತಿದ್ದನಂತೆ. ಕೇವಲ ಕೊಕೆನ್ ಮಾತ್ರವಲ್ಲ ಗಾಂಜವನ್ನು ಸಹ ಮನೆಯಲ್ಲಿ ಸಂಗ್ರಹಿಸಿದ್ದಾನೆ ಎಂದು ಪತ್ನಿ ದೂರಿದ್ದಾರೆ.

ತಾನು ಡ್ರಗ್ಸ್ ಚಟ ಮಾಡುವುದು ಸಾಲದು ಎಂಬಂತೆ ಪತ್ನಿಯೂ ಡ್ರಗ್ಸ್ ತೆಗೆದುಕೊಳ್ಳುವಂತೆ ಬಲವಂತ ಮಾಡುತ್ತಿದ್ದನೆ. ಹಲವು ಬಾರಿ ಪತ್ನಿಗೆ ಮಾದಕ ಮಾತ್ರೆಗಳನ್ನು ತಿನ್ನಿಸಿ ಸಹ ವಿಕೃತಿ ಮೆರೆದಿದ್ದಾನೆ. ಮಾತ್ರವಲ್ಲ ಬಲವಂತವಾಗಿ ಮದ್ಯ ಕುಡಿಸಿ, ಚಿತ್ರ ಹಿಂಸೆ ನೀಡುತ್ತಿದ್ದಾನೆ.

ವಿಡಿಯೋದಲ್ಲಿ ಏನಿದೆ?
ಆನ್ ಮಾಡ್ದ ರೆಕಾರ್ಡಿಂಗ್ ಎಂದು ಲೋಹಿತ್ ಕೇಳುತ್ತಾನೆ. ಈ ವೇಳೆ ಪತ್ನಿ ಹು ಎನ್ನುತ್ತಾರೆ. ಎಲ್ಲಿ ತೋರ್ಸು ಎಂದು ಕೇಳಿದಾಗ ಪತ್ನಿ ತೋರಿಸುತ್ತಾರೆ. ಹುಬ್ಬಳ್ಳಿಯವರನ್ನ ಕರೆಸಿ ಕೆಲ್ಸ ಕೊಡಿಸ್ತಾನ ನಿಮ್ಮಪ್ಪ ಅಲ್ಲಿ ಎನ್ನುತ್ತಾನೆ ಲೋಹಿತ್, ಪತ್ನಿ ಅಳುತ್ತಾ, ಆ ಹುಬ್ಬಳ್ಳಿಯವನಿಗೂ ನಮ್ಮ ಅಪ್ಪನಿಗೂ ಕಾಂಟಾಕ್ಟೇ ಇಲ್ಲ. ಈ ವೇಳೆ ಪತಿ ಹಂಗೆ ಅಳ್ಬೇಡ ಎನ್ನುತ್ತಾನೆ. ಈ ವೇಳೆ ಪತ್ನಿ ಹುಬ್ಳಿ ಭಾಷೆ ಮಾತಾಡಿದ್ರೆ, ಎಲ್ಲಾ ಹುಬ್ಳಿಯವರು ಆಗಲ್ಲ. ದೊಡ್ಡ ಹುಬ್ಳಿಗೂ, ಮುಗುಟ್ಕ ಅನ್ನೊ ಹುಬ್ಳಿಗು ವ್ಯತ್ಯಾಸ ಇದೆ ಎನ್ನುತ್ತಾನೆ.

ಲೋಹಿತ್ ಡ್ರಗ್ ಸೇವಿಸುತ್ತ, ನಾನು ಡ್ರಗ್ ಅಡಿಕ್ಟ್, ಅರ್ಥ ಆಯ್ತಾ? ನೋಡು ಹೇಗೆ ಸ್ಮೆಲ್ ಮಾಡ್ತಿನಿ ಎಂದು ಹೇಳಿ ಪತ್ನಿಯನ್ನು ಡ್ರಗ್ ತೆಗೆದುಕೊಳ್ಳದಿದ್ದಕ್ಕೆ ಅವಾಚ್ಯವಾಗಿ ಬೈಯುತ್ತಾನೆ. ಅಲ್ಲದೆ ಓಕೆ ಆರ್ ಯು ಹ್ಯಾಪಿ, ಯು ಹ್ಯಾಪಿ. ಇದು ಕೊಕೇನ್, ನಿನಗೂ ಬೇಕಾ..? ಹೇಳು ನಿನಗೆ ಏನು ಬೇಕು ಎಂದು ಕೇಳುತ್ತಾನೆ.

ಕೊನೆಯದಾಗಿ ಇಂಗ್ಲಿಷ್‍ನಲ್ಲಿ ಮಾತನಾಡುವ ಲೋಹಿತ್, ದಿಸ್ ಈಸ್ ಕಾಲ್ಡ್ ಸ್ನಾಟಿಂಗ್, ನೀನ್ ತಲೆಕೆಡಿಸಿಕೊಳ್ಳಬೇಡ. ನಾನ್ ಇದನ್ನ ಫೇಸ್‍ಬುಕ್‍ಗೆ ಹಾಕುತ್ತೇನೆ. ಅದಕ್ಕಾಗೇ ವಿಡಿಯೋ ರೆಕಾರ್ಡ್ ಮಾಡುತ್ತಿದ್ದೇನೆ. ನಾನ್ ಇದನ್ನ ಡಿಜಿಟಲ್ ಮಾರ್ಕೆಟಿಂಗ್ ಮಾಡ್ತಿನಿ. ನನ್ನ ಹತ್ತಿರ ಟೂಲ್ಸ್ ಇದೆ. ನೀನು ನೋಡಬೇಕಾ? ನಿನಗೆ ಅರ್ಥ ಆಗ್ತಿದ್ತಿಯಾ ನಾನ್ ಏನ್ ಹೇಳ್ತಾ ಇದ್ದೀನಿ ಎಂದು ಬ್ಲಡಿ ಹೆಲ್. ಯು ಆಲ್ ಮಿಸ್ ಯೂಸಿಂಗ್ ಯುವರ್ ಅಥಾರಿಟಿ, ಶುಡ್ ಐ ಸ್ಪೀಕ್ ಅಬೌಟ್ ಇಟ್. ಐ ಆಮ್ ಸ್ಲೇವ್ ಫಾರ್ ಯು. ಹೂ ದ ಹೆಲ್ ಆರ್ ಯು, ವಾಟ್ ಡಿಡ್ ಯು ಡು, ವೇರ್ ಡಿಡ್ ಯು ಡು, ಹೂಮ್ ಡಿಡ್ ಯು ಡು, ದಟ್ಸ್ ಆಲ್. ಯು ಫ…. ಇದು ನನ್ನ ಲೈಫ್, ನೀನು ನನ್ನ ಜೊತೆ ಬದುಕಬೇಕಂದರೆ ಈ ರೀತಿ ಬದುಕು. ಮೈ ಲೈಫ್, ಡೋಂಟ್ ಟಾಕ್ ಎನಿಥಿಂಗ್. ಆಯ್ತ ಕ್ಲೋಸ್ ಮಾಡು ಎಂದಿದ್ದಾನೆ.

 

Click to comment

Leave a Reply

Your email address will not be published. Required fields are marked *

www.publictv.in