International

ಅಬ್ಬಾ ಎಷ್ಟು ಉದ್ದ ಇದು – ಹೊಸ ದಾಖಲೆ ಬರೆದ ಹೆಬ್ಬಾವು

Published

on

Share this

ಫ್ಲೋರಿಡಾ: ಇಬ್ಬರು ಉರಗ ತಜ್ಞರಿಗೆ ಫ್ಲೋರಿಡಾದಲ್ಲಿ ಸಿಕ್ಕ ಬರ್ಮೀಸ್ ಹೆಣ್ಣು ಹೆಬ್ಬಾವೊಂದು ಹೊಸ ದಾಖಲೆಯನ್ನು ನಿರ್ಮಿಸಿದೆ.

ರಿಯಾನ್ ಆಸ್ಬರ್ನ್ ಮತ್ತು ಅವನ ರೂಮ್ ಮೇಟ್ ಕೆವಿನ್ ಪಾವ್ಲಿಡಿಸ್ಸಿಗೆ ಫ್ಲೋರಿಡಾದ ಎವಗ್ರ್ಲೇಡ್ಸ್ ನಲ್ಲಿ ಸಿಕ್ಕಿದ ಈ ಹಾವು, 18.9 ಅಡಿ ಉದ್ದವಿದ್ದು, ಈ ಮೂಲಕ ಈವರೆಗೂ ಸೆರೆಸಿಕ್ಕ ಹೆಬ್ಬಾವುಗಳ ಪೈಕಿ ಅತೀ ಉದ್ದ ಇರುವ ಹೆಬ್ಬಾವು ಎಂದು ದಾಖಲೆ ಬರೆದಿದೆ. ಈ ಹಿಂದೆ 18.8 ಅಡಿ ಇರುವ ಹೆಬ್ಬಾವು ಸೆರೆಸಿಕ್ಕಿದ್ದು, ಈ ಹಿಂದಿನ ದಾಖಲೆಯಾಗಿತ್ತು.

ರಿಯಾನ್ ಆಸ್ಬರ್ನ್ ಮತ್ತು ಕೆವಿನ್ ಪಾವ್ಲಿಡಿಸ್ ಇಬ್ಬರು ದಕ್ಷಿಣ ಫ್ಲೋರಿಡಾ ವಾಟರ್ ಮ್ಯಾನೇಜ್ಮೆಂಟ್ ಡಿಸ್ಟ್ರಿಕ್ಟ್ ಮತ್ತು ಫ್ಲೋರಿಡಾದ ಪೈಥಾನ್ ಎಲಿಮಿನೇಷನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಫ್ಲೋರಿಡಾದ ವನ್ಯಜೀವಿ ಸಂರಕ್ಷಣಾ ಆಯೋಗಕ್ಕಾಗಿ ಕೂಡ ಕೆಲಸ ಮಾಡುತ್ತಾರೆ. ಈ ಇಬ್ಬರು ರಾತ್ರಿ ವೇಳೆ ಈ ಹೆಬ್ಬಾವನ್ನು ನೀರಿನೊಳಗೆ ಹಿಡಿದಿದ್ದು, ಈ ಹೆಬ್ಬಾವು 47 ಕೆಜಿ ತೂಕ ಮತ್ತು 18.9 ಅಡಿ ಉದ್ದವಿದೆ.

ಈ ವಿಚಾರವಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಪಾವ್ಲಿಡಿಸ್, ನಾವು ಕಳೆದ ಶುಕ್ರವಾರ ರಾತ್ರಿ ಈ ಹಾವನ್ನು ಎವಗ್ರ್ಲೇಡ್ಸ್ ನಲ್ಲಿ ಸೊಂಟದಷ್ಟು ಆಳದ ನೀರಿನಿಂದ ಹಿಡಿದು ಹೊರತೆಗೆದಿದ್ದೇವೆ. ಇಷ್ಟೊಂದು ದಪ್ಪ ಇರುವ ಹೆಬ್ಬಾವನ್ನು ನಾನು ಎಂದೂ ನೋಡಿರಲಿಲ್ಲ. ಈ ಹಾವನ್ನು ಹಿಡಿಯುವಾಗಿ ನನ್ನ ಕೈಗಳು ನಡುಗಲು ಆರಂಭಿಸಿದವು. ಆದರೂ ನಾನು ಮತ್ತು ರಿಯಾನ್ ಆಸ್ಬರ್ನ್ ಹಾವನ್ನು ನೀರಿನಿಂದ ಹೊರತೆಗೆದುಕೊಂಡು ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

Record-breaker!Members of our Python Action Team and the South Florida Water Management District Python Elimination…

Gepostet von MyFWC Florida Fish and Wildlife am Donnerstag, 8. Oktober 2020

ಈ ಹೆಬ್ಬಾವು ಹೊಸ ದಾಖಲೆ ನಿರ್ಮಿಸಿದೆ ಎಂದು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗ ದೃಢಪಡಿಸಿದೆ. ನಮ್ಮ ಪೈಥಾನ್ ಆಕ್ಷನ್ ತಂಡ ಮತ್ತು ದಕ್ಷಿಣ ಫ್ಲೋರಿಡಾ ವಾಟರ್ ಮ್ಯಾನೇಜ್ಮೆಂಟ್ ಸದಸ್ಯರು ಪೈಥಾನ್ ಎಲಿಮಿನೇಷನ್ ಕಾರ್ಯಕ್ರಮದಲ್ಲಿ 18 ಅಡಿ, 9 ಇಂಚು ಉದ್ದದ ಮತ್ತು 47 ಕೆಜಿ ತೂಕದ ಬರ್ಮೀಸ್ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಇದು ಹೊಸ ದಾಖಲೆ ಎಂದು ಹೇಳಿದೆ.

Click to comment

Leave a Reply

Your email address will not be published. Required fields are marked *

Advertisement
Advertisement