Connect with us

Dharwad

ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಯುವತಿ – ಕ್ಷಣಾರ್ಧದಲ್ಲಿ ಮೊಬೈಲ್ ಎಸ್ಕೇಪ್

Published

on

ಹುಬ್ಬಳ್ಳಿ: ರಸ್ತೆಯಲ್ಲಿ ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಯುವತಿಯ ಮೊಬೈಲ್ ಅನ್ನು ಕಳ್ಳನೊಬ್ಬ ಎಸ್ಕೇಪ್ ಮಾಡಿಕೊಂಡು ಹೋಗಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.

ದೇಶಪಾಂಡೆ ನಗರದ ಬಳಿ ಇರುವ ವಿವೇಕಾನಂದ ಆಸ್ಪತ್ರೆ ಎದುರುಗಡೆ ಯುವತಿ ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಿರುತ್ತಾಳೆ. ಈ ವೇಳೆ ಹಿಂಬದಿಯಿಂದ ಸ್ಕೂಟಿಯಲ್ಲಿ ಬಂದ ಕಳ್ಳ ಆಕೆಯಿಂದ ಫೋನ್ ಕಿತ್ತುಕೊಂಡು ಹೋಗುತ್ತಾನೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯುವತಿ ಫೋನಿನಲ್ಲಿ ಮಾತನಾಡಿಕೊಂಡು ಹೋಗುವ ಸಮಯದಲ್ಲಿ ಹೊಂಚು ಹಾಕಿ ಬಂದ ಕಳ್ಳ ನಿಧಾನವಾಗಿ ಯುವತಿಯ ಬಳಿ ಹೋಗಿ ಫೋನ್ ಕಿತ್ತುಕೊಂಡು ಪರಾರಿಯಾಗುತ್ತಾನೆ. ಈ ವೇಳೆ ಯುವತಿ ಆತನನ್ನು ಹಿಡಿಯಲು ಬೆನ್ನತ್ತುತ್ತಾಳೆ. ಆದರೆ ಆತ ಎಸ್ಕೇಪ್ ಆಗುತ್ತಾನೆ. ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು ಕೂಡ ಯಾರೂ ಯುವತಿಯ ಸಹಾಯಕ್ಕೆ ಬಂದಿಲ್ಲ.

ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *