Crime
ಸಲೂನ್ಗೆ ಬಂದು ಬರ್ಬರವಾಗಿ ಕೊಲೆಯಾದ ಮಾಜಿ ರೌಡಿ ಶೀಟರ್

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ನೆತ್ತರು ಹರಿದಿದೆ. ಕಟಿಂಗ್ ಶಾಪ್ಗೆ ಆಗಮಿಸಿದ್ದ ಮಾಜಿ ರೌಡಿಶೀಟರ್ ಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಬಾಬಾಸಾನ್ ಗಲ್ಲಿಯಲ್ಲಿ ನಡೆದಿದೆ.
ಕಮರಿಪೇಟೆಯ ಹಳೇ ರೌಡಿ ಶೀಟರ್ ರಮೇಶ್ ಭಾಂಡಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ರಮೇಶ್ ಭಾಂಡಗೆ ಹಲವು ಅಕ್ರಮ ಧಂದೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ, ಇಂದು ಮಧ್ಯಾಹ್ನ ಕಟಿಂಗ್ ಶಾಪ್ ಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಇರಿದು ಹತ್ಯೆಗೈದಿದ್ದಾನೆ.
ಕೊಲೆ ಮಾಡಿದ ನಂತರ ರೌಡಿಶೀಟರ್ ಹಾಗೂ ಕೊಲೆ ಮಾಡಿದ ವ್ಯಕ್ತಿ ಘಟನಾ ಸ್ಥಳದಲ್ಲಿ ಓಡಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರಮೇಶ್ ಬಾಂಡಗೆಗೆ ಹಾಡಹಗಲೇ ಚಾಕು ಇರಿದ ವ್ಯಕ್ತಿ ಪರಾರಿಯಾಗಿದ್ದು, ಘಟನೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಶಹರ ಪೊಲೀಸ್ ಅಧಿಕಾರಿಗಳಿಂದ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
