Connect with us

Crime

ನಶೆಯಲ್ಲಿ ಎಸಿಪಿಯಿಂದ ಪೇದೆಗೆ ಕಪಾಳಮೋಕ್ಷ, ಎಎಸ್‍ಐ ಜೊತೆ ಗಲಾಟೆ

Published

on

– ಸಿಸಿ ಕ್ಯಾಮೆರಾದಲ್ಲಿ ಅಧಿಕಾರಿಯ ದರ್ಪ ಸೆರೆ

ಹುಬ್ಬಳ್ಳಿ: ಹಿರಿಯ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಗೆ ಕಪಾಳ ಮೋಕ್ಷ ಮಾಡಿ, ಎಎಸ್‍ಐ ಜೊತೆ ರಂಪಾಟ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ ಪೇದೆ ಹಾಗೂ ಎಎಸ್‍ಐ ಮೇಲೆ ಎಸಿಪಿ ಹೊಸಮನಿ ದರ್ಪ ತೋರಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಕ್ರಮ ಮರಳು ಸಾಗಾಟ ಹಾಗೂ ಮರಳು ತುಂಬಿದ ಲಾರಿಗಳು ಮಹಾನಗರದಲ್ಲಿ ಇತ್ತೀಚೆಗೆ ಓಡಾಡುತ್ತಿರುವ ಪರಿಣಾಮ ಅಕ್ರಮಕ್ಕೆ ಬ್ರೇಕ್ ಹಾಕುವಂತೆ ಪೊಲೀಸ್ ಆಯುಕ್ತ ಲಾಬೂರಾಮಸಿಂಗ್ ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು.

ಪೊಲೀಸ್ ಆಯುಕ್ತರ ನಿರ್ದೇಶನದಂತೆ ಇಲಾಖೆಯ ಸಿಬ್ಬಂದಿ ಮರಳು ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದರು. ಇದರಿಂದ ಕುಪಿತಗೊಂಡ ಸಂಚಾರಿ ವಿಭಾಗದ ಎಸಿಪಿ ಎಂ.ಎಸ್ ಹೊಸಮನಿ ಶುಕ್ರವಾರ ರಾತ್ರಿ ಮದ್ಯದ ನಶೆಯಲ್ಲಿ ನೈಟ್ ರೌಂಡ್ಸನಲ್ಲಿದ್ದ ವೇಳೆ ದಕ್ಷಿಣ ಸಂಚಾರಿ ಠಾಣೆಯ ಪೇದೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದೇ ವೇಳೆ ಠಾಣೆಯಲ್ಲಿದ್ದ ಎಎಸ್‍ಐ ಜೊತೆಗೂ ಗಲಾಟೆ ಮಾಡಿದ್ದಾರೆ.

ಎಸಿಪಿ ಎಂ.ಎಸ್ ಹೊಸಮನಿ ಪೇದೆ ಮೇಲೆ ಕಪಾಳ ಮೋಕ್ಷ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಮಾಹಿತಿ ಪೊಲೀಸ್ ಆಯುಕ್ತರವರೆಗೂ ತಲುಪಿದೆ. ಎಸಿಪಿ ಎಂ.ಎಸ್ ಹೊಸಮನಿ ಕಪಾಳಮೋಕ್ಷ ಮಾಡಿದ ಬಗ್ಗೆ ಇದೀಗ ಇಲಾಖಾ ವಿಚಾರಣೆ ಆರಂಭಿಸಿದೆ.

Click to comment

Leave a Reply

Your email address will not be published. Required fields are marked *

www.publictv.in