Connect with us

Dharwad

ಪ್ರೀತಿ ನಾಟಕವಾಡಿ ಯುವತಿಯ ಅಶ್ಲೀಲ ಫೋಟೋ ಹರಿಬಿಟ್ಟ ಭೂಪ..!

Published

on

ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿದ ಯುವಕನೋರ್ವ ಯುವತಿಯ ನಡತೆಯನ್ನು ಅನುಮಾನಿಸಿ ಆಕೆಯ ಆಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಲಬುರ್ಗಿಯ ಯುವಕನೊಬ್ಬ ಯುವತಿಗೆ ವಾಟ್ಸಪ್ ವೀಡಿಯೋ ಕಾಲ್ ಮೂಲಕ ಅಶ್ಲೀಲ ವೀಡಿಯೋಗಳ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡು, ಅವಳ ಹೆಸರಲ್ಲಿಯೇ ನಕಲಿ ಫೇಸ್‍ಬುಕ್ ಖಾತೆ ತೆರೆದು ಅವುಗಳನ್ನು ಪೋಸ್ಟ್ ಮಾಡಿದ್ದಾನೆ.

ಸಚಿನ್ ಶರಣಬಸಪ್ಪ ಕಾರ್ಣಿಕ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ನಗರದ ಮ್ಯಾದರ ಓಣಿಯ 24 ವರ್ಷದ ಯವತಿಗೆ ಸಚಿನ್ ಆನ್‍ಲೈನ್‍ನಲ್ಲಿ ಪರಿಚಯವಾಗಿ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ಆದ್ರೆ ಬರುಬರುತ್ತಾ ನೀನು ಬೇರೆಯರನ್ನು ಪ್ರೀತಿಸುತ್ತಿದ್ದೀಯಾ, ನಿಶ್ಚಿತಾರ್ಥ ಮಾಡಿಕೊಂಡಿದ್ದಿ ಎಂದು ಸ್ಕ್ರೀನ್ ಶಾಟ್‍ಗಳನ್ನು ಯುವತಿಯ ವಾಟ್ಸಪ್‍ಗೆ ಕಳುಹಿಸಿ ಹೆದರಿಸಿದ್ದ. ನಂತರ ಮಾನ ಹರಾಜು ಹಾಕುತ್ತೇನೆ ಎಂದು ಅವಳ ಹೆಸರಲ್ಲಿಯೇ ನಕಲಿ ಫೇಸ್‍ಬುಕ್ ಖಾತೆ ತೆರೆದು ಪೋಸ್ಟ್ ಮಾಡಿ ವೈರಲ್ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಸೈಬರ್ ಠಾಣೆ ಪೊಲೀಸರು ಆರೋಪಿ ಸಚಿನ್ ನಾಗಿ ಬಲೆ ಬೀಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in