Connect with us

Crime

ಬಾರ್​ಗೆ ಕನ್ನ ಹಾಕಿ, ಅಲ್ಲೇ ಕುಡಿದು ಹೋದ ಐನಾತಿ ಕಳ್ಳ

Published

on

ಹುಬ್ಬಳ್ಳಿ: ಬಾರ್ ಗೆ ನುಗ್ಗಿದ ಕಳ್ಳನೋರ್ವ ಕಳ್ಳತನ ಮಾಡಿ ಅಲ್ಲಿಯೇ ಮದ್ಯ ಕುಡಿದು ಹೋಗಿರುವ ಘಟನೆ ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿ ನಡೆದಿದೆ. ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊದಲಿಗೆ ಬಾರ್‍ಗೆ ನುಗ್ಗಿದ ಕಳ್ಳ, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು 15 ರಿಂದ 20 ಸಾವಿರ ಹಣವನ್ನು ಚೀಲಕ್ಕೆ ತುಂಬಿಕೊಂಡಿದ್ದಾನೆ. ನಂತರ ಕೌಂಟರ್ ನಲ್ಲಿದ್ದ ವಿವಿಧ ಬ್ರ್ಯಾಂಡ್ ಗಳ ಮದ್ಯವನ್ನು ಸಹ ಚೀಲದಲ್ಲಿ ಹಾಕಿಕೊಂಡಿದ್ದಾನೆ. ಕೊನೆಗೆ ಅಲ್ಲಿಯೇ ಒಂದೆರಡು ಪೆಗ್ ಹಾಕಿದ್ದಾನೆ.

ಬಾರ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನ ಚಹರೆ ಸೆರೆಯಾಗಿದೆ. ಈ ಸಂಬಂಧ ಗೋಕುಲ್ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *