Connect with us

Dharwad

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಆರ್.ಬಿ.ಪಾಟೀಲ್ ವಿಧಿವಶ

Published

on

ಹುಬ್ಬಳ್ಳಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಿದ್ದ ಖ್ಯಾತ ವೈದ್ಯ ಆರ್.ಬಿ.ಪಾಟೀಲ್ (95) ಅವರು ಇಂದು ವಿಧಿವಶರಾಗಿದ್ದಾರೆ.

ಆರ್.ಬಿ.ಪಾಟೀಲ್ ಅವರು ಕಳೆದ ಹಲವು ದಿನಗಳಿಂದ ಮೆದುಳು ರಕ್ತಸ್ರಾವ (brain hemorrhage) ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆವನ್ನು ಸ್ವಗ್ರಾಮ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕೌಲಗಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆ ಕೌಲಗಿ ಗ್ರಾಮದವರಾದ ಆರ್.ಬಿ.ಪಾಟೀಲ್ ಅವರು, ಮುಂಬೈನಲ್ಲಿ 1951ರಂದು ಎಂಬಿಬಿಎಸ್, ಇಂಗ್ಲೆಂಡ್‍ನಲ್ಲಿ ಎಫ್‍ಆರ್‍ಸಿಎಸ್ ಪದವಿಯನ್ನು 1956ರಲ್ಲಿ ಪಡೆದಿದ್ದರು. ಬಳಿಕ ಹುಬ್ಬಳ್ಳಿಯಲ್ಲಿ ಹಲವು ದಶಕಗಳ ಕಾಲ ಕೋ ಆಪರೇಟಿವ್ ಆಸ್ಪತ್ರೆ ನಡೆಸಿ ನಾಡಿನ ಮನೆ ಮಾತಾಗಿದ್ದರು.

ಆರ್.ಬಿ.ಪಾಟೀಲ್ ಅವರು ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿದರು. ಈ ಮೂಲಕ ಉತ್ತರ ಕರ್ನಾಟಕ ಭಾಗದ ಮೊದಲ ಹಾಗೂ ಏಕೈಕ ಕ್ಯಾನ್ಸರ್ ಆಸ್ಪತ್ರೆಯ ಎನ್ನುವ ಖ್ಯಾತಿಯನ್ನು ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆ ಗಳಿಸಿತ್ತು. ಆರ್.ಬಿ. ಪಾಟೀಲ್ ಅವರು 25 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಆರ್.ಬಿ.ಪಾಟೀಲ್ ಅವರ ಸಾಧನೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹತ್ತು ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ. 1969ರಲ್ಲಿ ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಅಂದಿನ ರಾಷ್ಟ್ರಪತಿ ಜಾಕೀರ ಹುಸೇನ್ ಅವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv