ಬಿಸಿ ಬಿಸಿ ಬೇಳೆ ಹೋಳಿಗೆ ಮಾಡಿ ತುಪ್ಪದ ಜೊತೆಗೆ ಸವಿಯಿರಿ

By
1 Min Read

ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ಪ್ರತಿದಿನ ಮಾಂಸಹಾರ, ಸಸ್ಯಹಾರವನ್ನು ತಿಂದು ಬೇಸರವಾಗಿದೆ. ನಾಲಿಗೆ ರುಚಿ ಕೆಟ್ಟಿದೆ ಎನ್ನುವವರು ವಾರದಲ್ಲಿ ಒಮ್ಮೆಯಾದ್ರೂ ಸಿಹಿತಿಂಡಿಯನ್ನು ತಿನ್ನಬೇಕು ಎಂದು ಬಯಸುತ್ತಾರೆ. ಸಿಹಿಯಾದ ಅಡುಗೆಯನ್ನು ಹೆಚ್ಚು ಜನರು ಇಷ್ಟ ಪಟ್ಟು ಸವಿಯುತ್ತಾರೆ. ಸಿಹಿ ಅಡುಗೆಯನ್ನು ಇಷ್ಟಪಡುವವರಿಗಾಗಿ ಇಂದು ನಾವು ಮನೆಯಲ್ಲಿ ಸರಳ ವಿಧಾನದಲ್ಲಿ ಬೇಳೆ ಹೋಳಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ಸಾಮಗ್ರಿಗಳು:
* ಕಡಲೆ ಬೇಳೆ- 2ಕಪ್
* ಮೈದಾ ಹಿಟ್ಟು- 1ಕಪ್
* ಅರಿಶಿಣ ಪುಡಿ- ಅರ್ಧ ಚಮಚ
* ಬೆಲ್ಲ – 1ಕಪ್
* ಉಪ್ಪು- ಸ್ವಲ್ಪ
* ಏಲಕ್ಕಿ ಪುಡಿ- ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್

ಮಾಡವು ವಿಧಾನ:

* ಮೊದಲು ನೆನೆಸಿದ ಕಡಲೆ ಬೇಳೆ ಬೇಯಿಸಿಕೊಳ್ಳಿ.
* ಬೇಯಿಸಿದ ಬೇಳೆಯ ಬಳಿಕ ನೀರು ತೆಗೆದು ಬೆಲ್ಲ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಳ್ಳಿ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

* ನಂತರ ಬೇಳೆ ಮಿಶ್ರಣವನ್ನು ರುಬ್ಬಿಕೊಂಡು ಹೂರ್ಣ ಮಾಡಿಕೊಳ್ಳಿ.
* ಬಳಿಕ ಮೈದಾ ಹಿಟ್ಟಿಗೆ ಅರಿಶಿಣ, ಅಡುಗೆ ಎಣ್ಣೆ ಹಾಕಿ ಕಲಸಿಕೊಳ್ಳಿ.

* ನಂತರ ಮೈದಾನ ಹಿಟ್ಟಿನ ಒಳಗೆ ಬೇಳೆ ಮಿಶ್ರಣವನ್ನು ಹಾಕಿ ಹೋಳಿಗೆ ಆಕಾರಕ್ಕೆ ತಟ್ಟಿಕೊಂಡು ಹೂರ್ಣ ಇಟ್ಟು ಲಟ್ಟಿಸಬೇಕು.


* ಒಂದು ತವಾಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಹೋಳಿಗೆ ಹಾಕಿ ಕಾಯಿಸಿಕೊಳ್ಳಿ. ಈಗ ಬೇಳೆ ಹೋಳಿಗೆ ಸವಿಯಲು ಸಿದ್ಧವಾಗಿತ್ತದೆ.
*ಬಿಸಿಯಾದ ಬೇಳೆ ಹೋಳಿಗೆ ತುಪ್ಪದೊಂದಿಗೆ ಸವಿಯಿರಿ

Share This Article
Exit mobile version