Connect with us

Bengaluru City

ಸರಳವಾಗಿ ಮಾಡಿ ಮಟನ್ ಮಸಾಲಾ

Published

on

Share this

ನಾನ್‍ವೆಜ್ ಪ್ರಿಯರು ಪ್ರತಿ ವೀಕೆಂಡ್‍ನಲ್ಲಿ ಮಟನ್ ಮಸಾಲ, ಕಬಾಬ್, ಬಿರಿಯಾನಿ ಎಂದು ರುಚಿಯಾದ ಅಡುಗೆ ಮಾಡುತ್ತಾರೆ. ಆದರೆ ನೀವು ಇಂದು ರುಚಿ ರುಚಿಯಾಗಿ ಹೋಟೆಲ್‍ನಲ್ಲಿ ಮಾಡುವ ಹಾಗೇ ಮಟನ್ ಮಸಾಲೆ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಗಳು:
* ಮೆಂತೆ ಸೊಪ್ಪು
* ಪುದೀನಾ ಸೊಪ್ಪು
* ಶುಂಠಿ, ಬೆಳ್ಳುಳ್ಳಿ
* ಈರುಳ್ಳಿ- 2
* ಅಡುಗೆ ಎಣ್ಣೆ- 1 ಕಪ್
* ಚಕ್ಕೆ, ಲವಂಗ
* ಕರಿ ಮೆಣಸು – 3 ಟೀ ಸ್ಪೂನ್
* ಗಸಗಸೆ- 2 ಟೀ ಸ್ಪೂನ್
* ಹಸಿ ಮೆಣಸಿನಕಾಯಿ- 4 ರಿಂದ 5
* ತೆಂಗಿನ ಕಾಯಿ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು
* ಮಟನ್- 1 ಕೆಜಿ

ಮಾಡುವ ವಿಧಾನ:
* ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಚಕ್ಕೆ, ಲವಂಗ, ಕರಿ ಮೆಣಸು, ಗಸಗಸೆ ಹಾಕಿ ಹುರಿದುಕೊಳ್ಳಿ.

* ನಂತರ ಇದಕ್ಕೆ ಈರುಳ್ಳಿ ಹಾಕಿ, ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಬೇಕು.

* ಬಳಿಕ ಅದೇ ಬಾಣಲೆಗೆ ಹಸಿ ಮೆಣಸು, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಫ್ರೈ ಮಾಡಿಕೊಳ್ಳಬೇಕು.

 

* ನಂತರ ಮಿಕ್ಸಿ ಜಾರಿಗೆ ತೆಂಗಿನ ಕಾಯಿ ಹಾಕಿ, ಫ್ರೈ ಮಾಡಿದ ಮಸಲಾ ಹಾಕಿ ರುಬ್ಬಿಕೊಳ್ಳಬೇಕು.

* ಬಳಿಕ ಒಂದು ಕುಕ್ಕರ್‍ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿ. ಬಳಿಕ ಮಟನ್, ಉಪ್ಪು ಹಾಕಿ ಅದನ್ನು ಚೆನ್ನಾಗಿ ಹುರಿದುಕೊಳ್ಳಿ, ಬಳಿಕ ರುಬ್ಬಿದ ಮಿಶ್ರಣ ಹಾಕಿ 2 ವಿಜಿಲ್ ಬರಿಸಬೇಕು. ಈಗ ರುಚಿಕರವಾದ ಮಟನ್ ಮಸಾಲಾ ಸವಿಯಲು ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement