Connect with us

Food

ಸಿಹಿಯಾದ ಅಂಜೂರ ಹಲ್ವಾ ನೀವು ಮಾಡಿ

Published

on

Share this

ಸಿಹಿ ತಿಂಡಿಗಳು ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡುತ್ತದೆ. ಅಂಜೂರ ಹಣ್ಣಿನಿಂದ ತಯಾರಿಸಲಾಗುವ ಹಲ್ವಾ ವಿಶೇಷ ರುಚಿ ಹಾಗೂ ಆರೋಗ್ಯವನ್ನು ನೀಡುತ್ತದೆ. ಹೀಗಾಗಿ ನೀವು ಇಂದು ಅಂಜೂರದ ಹಲ್ವಾ ಮಾಡಿ ಸವಿಯಿರಿ. ಇದನ್ನೂ ಓದಿ:  11 ವರ್ಷಕ್ಕೆ ಡಿಗ್ರಿ ಮುಗಿಸಿದ ಬಾಲಕ

ಬೇಕಾಗುವ ಸಾಮಗ್ರಿಗಳು:

* ಅಂಜೂರ- 1ಕಪ್
* ಸಕ್ಕರೆ- 2ಕಪ್
* ಏಲಕ್ಕಿ
* ಚಕ್ಕೆ
* ಮಿಶ್ರ ಡ್ರೈ ಫ್ರೂಟ್ಸ್- 1ಕಪ್
* ತುಪ್ಪ- ಅರ್ಧ ಕಪ್

ಮಾಡುವ ವಿಧಾನ:
* ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿಯಾದ ಬಳಿಕ ದಾಲ್ಚಿನ್ನಿ, ಏಲಕ್ಕಿ ಸೇರಿಸಿ ಚೆನ್ನಾಗಿ ಫ್ರೈ ಮಾಡಬೇಕು.

* ನಂತರ ನೆನೆಸಿಕೊಂಡ ಅಂಜೂರ ಹಣ್ಣನ್ನು ಸೇರಿಸಿ, ಚೆನ್ನಾಗಿ ಫ್ರೈ ಮಾಡಬೇಕು.

* ಬಾಣಲೆಗೆ ನೀರನ್ನೂ ಸೇರಿಸಿ, ಮಿಶ್ರಣವು ಮೃದುವಾಗಿ ಬೇಯಲು ಬಿಡಬೇಕು.

* ಅಂಜೂರವು 10-15 ನಿಮಿಷಗಳ ಕಾಲ ಬೇಯಿಸಿದ ನಂತರ ಸಕ್ಕರೆಯನ್ನು ಸೇರಿಸಿ. ಅಂಜೂರದ ಹಣ್ಣು ಮತ್ತು ಸಕ್ಕರೆ ಚೆನ್ನಾಗಿ ಬೆರೆತು ದಪ್ಪ ಹದಕ್ಕೆ ಬರುವ ತನಕ ಬೇಯಿಸಬೇಕು.

* ಹಲ್ವಾ ಮಿಶ್ರಣ ದಪ್ಪವಾದ ಸ್ಥಿರತೆ ಪಡೆಯುತ್ತಿದ್ದಂತೆ ಚೆನ್ನಾಗಿ ಮಿಶ್ರಗೊಳಿಸಬೇಕು ಐದು ನಿಮಿಷಗಳ ಕಾಲ ಬೇಯಿಸಬೇಕು.

* ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಒಣ ಹಣ್ಣುಗಳನ್ನು ಫ್ರೈ ಮಾಡಿ ಅಂಜೂರದ ಹಲ್ವಾಗೆ ಸೇರಿಸಿದರೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement