ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ: ರೆಸಾರ್ಟ್ ಮಾಲೀಕರ ಅಕ್ರೋಶ

Advertisements

ಮಡಿಕೇರಿ: ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹೊಸವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಅದರಲ್ಲೂ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿರುವ ನಿರ್ಧಾರಕ್ಕೆ ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ ಎಂದು ಕೊಡಗಿನ ಹೋಟೆಲ್, ರೆಸ್ಟೋರೆಂಟ್ ಹೋಂಸ್ಟೇ, ರೆಸಾರ್ಟ್ ಮಾಲೀಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisements

ಕಳೆದ ಎರಡು ವರ್ಷದಿಂದ ಲಾಕ್‍ಡೌನ್ ಹೆಸರಲ್ಲಿ ಸರಿಯಾದ ವ್ಯಾಪಾರ ಆಗದೆ ಸಂಕಷ್ಟ ಅನುಭವಿಸಿದ್ದೇವೆ. ನಮ್ಮ ವ್ಯಾಪಾರವೆಲ್ಲ ಹಾಳಾಗಿದ್ದು ಆರ್ಥಿಕವಾಗಿ ಚೇತರಿಕೆ ಕಷ್ಟವಾಗಿದೆ. ಈಗಾಗಲೇ ಜಿಲ್ಲೆಯ ಹೊಸ ವರ್ಷದ ಸಂಭ್ರಮ ಅಚರಣೆಗೆ ಶೇಕಡಾ 100% ಹೋಂಸ್ಟೇಗಳು ಭರ್ತಿಯಾಗಿದ್ದು. ಸರ್ಕಾರ ದಿಢೀರ್ ಅಗಿ ನೈಟ್ ಕರ್ಫ್ಯೂ ಬೇರೆ ಜಾರಿ ಮಾಡಿರುವುದರಿಂದ ಹೋಂಸ್ಟೇಗೆ ಬರುವ ಪ್ರವಾಸಿಗರು ತಮ್ಮ ಹಣವನ್ನು ವಾಪಸ್ಸು ಮಾಡಿ ನಾವು ತಮಿಳುನಾಡು, ಗೋವಾ ಕಡೆಗಳಿಗೆ ತೆರಳುತ್ತೇವೆ ಎಂದು ಹೇಳಿ ಹಣವನ್ನು ಹಿಂಪಡೆಯುತ್ತಿದ್ದಾರೆ. ಇದರಿಂದ ಮತ್ತಷ್ಟು ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

Advertisements

ಕೊಡಗು ಜಿಲ್ಲೆಯ ದಸರಾ ಹಾಗೂ ಡಿಸೆಂಬರ್, ಜನವರಿ ತಿಂಗಳಲ್ಲಿ ಮಾತ್ರ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚು ಕಂಡು ಬರುತ್ತದೆ. ಬಾಕಿ ಸಮಯದಲ್ಲಿ ಪ್ರವಾಸಿಗರೇ ಹೆಚ್ಚು ಜಿಲ್ಲೆಯಲ್ಲಿ ಕಂಡು ಬರುವುದಿಲ್ಲ. ಹೀಗೆ ಇರುವಾಗ ನೈಟ್ ಕರ್ಫ್ಯೂ ಮಾಡಿರುವುದು ಸರಿಯಲ್ಲ. ಈಗಾಗಲೇ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಚರ್ಚ್, ಮಸೀದಿಗಳಿಗೆ ಯಾವುದೇ ನಿರ್ಬಂಧಗಳು ಇಲ್ಲ. ರಾತ್ರಿ ಹೊತ್ತು ಮಾತ್ರ ಕೋವಿಡ್ ಬರುತ್ತದೆ ಎಂದರೆ ಅದು ತಪ್ಪು. ಹಾಗೇ ಬೇಕಾದ್ರೆ ಬೆಳಗ್ಗೆಯಿಂದಲ್ಲೇ ಕರ್ಫ್ಯೂ ಜಾರಿ ಮಾಡಿ. ಈ ರೀತಿ ಅವೈಜ್ಞಾನಿಕವಾಗಿ ನೈಟ್ ಕರ್ಫ್ಯೂ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿ.28 ರಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ – ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್

Advertisements

ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವ ಹೋಟೆಲ್, ರೆಸ್ಟೋರೆಂಟ್, ಹೋಂಸ್ಟೇ, ರೆಸಾರ್ಟ್ ಮಾಲೀಕರು ಹೊಸವರ್ಷದ ಆಚರಣೆಗೆ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ನಿಯಮದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರ ಆಕ್ರೋಶಕ್ಕೆ ಮಣಿದು ಸರ್ಕಾರ ನಿಯಮಗಳನ್ನು ಸಡಿಲಿಕೆ ಮಾಡುತ್ತ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

Advertisements
Exit mobile version