ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ನಿರ್ಮಿಸಿದ ಹೊಸೂರು ಗ್ರಾಮಸ್ಥರು

Advertisements

ಬಾಗಲಕೋಟೆ: ಅಪ್ಪು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೂ ಪುನೀತ್ ಫ್ಯಾನ್ಸ್ ಒಂದಿಲ್ಲಾ ಒಂದು ರೀತಿ ತಮ್ಮ ಅಭಿಮಾನವನ್ನು ತೋರಿಸುತ್ತಲೇ ಇದ್ದಾರೆ. ಹೊಸೂರು ಗ್ರಾಮಸ್ಥರು ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ಕಟ್ಟಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಅಪ್ಪು ಮಿನಿಸ್ಮಾರಕ ನಿರ್ಮಾಣವಾಗಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರಿಂದ ಸ್ಮಾರಕದಲ್ಲಿ ಸುಂದರ ಮಂಟಪ ನಿರ್ಮಾಣವಾಗಿದೆ. ಮಂಟಪದಲ್ಲಿ ಅಪ್ಪು ಭಾವಚಿತ್ರ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಅಪ್ಪು ಭಾವಚಿತ್ರದ ಕೆಳಗೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಪುನೀತ್ ರಾಜ್ ಕುಮಾರ್ ಎಂಬ ಬರಹವನ್ನು ಬರೆದಿದ್ದಾರೆ.

Advertisements

ಗ್ರಾಮದ ಸಂತೆ ಮಾರುಕಟ್ಟೆ ಜಾಗದಲ್ಲಿ ಸ್ಮಾರಕ ನಿರ್ಮಿಸಿದ ಗ್ರಾಮಸ್ಥರು ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಅಪ್ಪು ಚಿತ್ರಗಳು, ಸಾಮಾಜಿಕ ಕಾರ್ಯ ನೆನೆದು ಗ್ರಾಮಸ್ಥರಿಂದ ಸ್ಮಾರಕ ಕಟ್ಟಿ ಗೌರವ ಸಲ್ಲಿಸಲಾಯಿತು. ಸ್ಮಾರಕವನ್ನು ಮಾಡಿದ ಗ್ರಾಮಸ್ಥರೆಲ್ಲರೂ ಸೇರಿ ಉದ್ಘಾಟಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿಗೆ ಧಾರವಾಡದಿಂದ ನಡೆದೇ ಬಂದ ಅಭಿಮಾನಿ

ಈ ಸ್ಮಾರಕಕ್ಕೆ ಹೂಗಳಿಂದ ಅಲಂಕಾರ ಮಾಡಿ, ಮೇಣದ ದೀಪ ಹಚ್ಚಿ ಗೌರವ ಸಲ್ಲಿಸಿದ್ದಾರೆ. ಶಾಲಾಮಕ್ಕಳಿಂದ ಅಪ್ಪು ಹೆಸರಿನ ಮೇಲೆ ಗಾಯನ ಕಾರ್ಯಕ್ರಮ ನಡೆಯಿತು. ಗ್ರಾಮದಲ್ಲಿ ಪುನೀತ್ ಹೆಸರಲ್ಲಿ ಅನ್ನಸಂತರ್ಪಣೆ ನಡೆಸಿದರು. ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

Advertisements

Advertisements
Exit mobile version