Connect with us

Latest

ಮುಂದಿನ ಐಪಿಎಲ್‍ನಲ್ಲಿ ಆಡ್ತೀರಾ – ಪ್ರಶ್ನೆಗೆ ಉತ್ತರ ಕೊಟ್ಟ ಧೋನಿ

Published

on

ಹೈದರಾಬಾದ್: ಐಪಿಎಲ್ ಯಶಸ್ವಿ ನಾಯಕ ಎಂಎಸ್ ಧೋನಿ ಮುಂದಿನ ವರ್ಷ ನಾಯಕನಾಗಿ ಚೆನ್ನೈ ತಂಡವನ್ನು ಮುನ್ನಡೆಸುತ್ತಾರಾ ಎನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.

ಪಂದ್ಯ ಮುಗಿದ ಬಳಿಕ ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಮುಂದಿನ ವರ್ಷ ಐಪಿಎಲ್ ಆಡುತ್ತೀರಾ ಎನ್ನುವ ಪ್ರಶ್ನೆಗೆ “ಹೌದು. ನಾನು ಆಶಾವಾದವನ್ನು ಇಟ್ಟುಕೊಂಡಿದ್ದೇನೆ” ಎಂದು ಉತ್ತರಿಸಿದ್ದಾರೆ.

37 ವರ್ಷದ ಧೋನಿ ವಿಶ್ವಕಪ್ ಬಳಿಕ ಎಲ್ಲ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತರಾಗಲಿದ್ದಾರೆ. ಹೀಗಾಗಿ 2019ರ ಐಪಿಎಲ್‍ನಲ್ಲಿ ಧೋನಿ ಕೊನೆಯ ಬಾರಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಹೀಗಾಗಿ ಧೋನಿ ಅವರ ಜೊತೆಯೇ ಈ ಪ್ರಶ್ನೆಯನ್ನು ಕೇಳಲಾಗಿತು.

ತಂಡವಾಗಿ ನಮಗೆ ಇದೊಂದು ಉತ್ತಮ ಅನುಭವ. ಫೈನಲ್ ವರೆಗೆ ನಾವು ತಲುಪಿದ್ದು ಹೇಗೆ ಎನ್ನುವ ಬಗ್ಗೆ ಒಂದು ಅವಲೋಕನ ಮಾಡಬೇಕು. ಐಪಿಎಲ್ ಬಳಿಕ ವಿಶ್ವಕಪ್‍ಗೆ ನಾವು ತಯಾರಾಗಬೇಕಿದೆ. ನನ್ನ ಮುಂದಿನ ಆದ್ಯತೆ ವಿಶ್ವಕಪ್ ಎಂದು ಈ ವೇಳೆ ಧೋನಿ ಹೇಳಿದರು.

2014-15 ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಭಾರತ 2-0 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು. ಮೂರನೇ ಪಂದ್ಯ ಡ್ರಾಗೊಂಡ ಬಳಿಕ ಧೋನಿ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.