ದಂಪತಿಯ ಹನಿಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

Advertisements

– 30 ಮಹಿಳೆಯರನ್ನಿಟ್ಟುಕೊಂಡು ದಂಧೆ

ಗಾಜಿಯಾಬಾದ್: ಹುಡುಗಿಯರನ್ನು ಬಿಟ್ಟು ಉದ್ಯಮಿಗಳು ಮತ್ತು ಶ್ರೀಮಂತರನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ದಂಪತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

Advertisements

ಯೋಗೇಶ್ ಮತ್ತು ಸಪ್ನಾಗೌತಮ್ ದಂಪತಿ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಗಾಜಿಯಾಬಾದ್ ಮೂಲದವರಾಗಿದ್ದಾರೆ. ಇವರು 30 ಮಹಿಳೆಯರನ್ನಿಟ್ಟುಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು.

Advertisements

ಈ ದಂಪತಿ ದೇಶಾದ್ಯಂತ ಸುಮಾರು 300 ಮಂದಿಗೆ ಹನಿಟ್ರ್ಯಾಪ್ ಮಾಡಿದ್ದು, ಒಂದೇ ವರ್ಷದಲ್ಲಿ 20 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

Advertisements

ಯೋಗೇಶ್ ಶ್ರೀಮಂತರು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರ ಬ್ಯಾಂಕ್ ವಹಿವಾಟಿನ ಜೊತೆಗೆ ಫೋನ್ ನಂಬರ್ ಸಹಿತ ವಿವರ ತಿಳಿದುಕೊಳ್ಳುತ್ತಿದ್ದರು. ನಂತರ ಯೋಗೇಶ್ ಪತ್ನಿ ಸಪ್ನಾ, ಜಾಲತಾಣಗಳಲ್ಲಿ ನಕಲಿ ಖಾತೆ ತೆಗೆದು, ಅವರೊಂದಿಗೆ ಚಾಟ್ ಮಾಡುತ್ತಿದ್ದಳು. ಅಲ್ಲದೆ ಈ ಕೆಲಸಕ್ಕೆ ಕೆಲ ಮಹಿಳೆಯರನ್ನೂ ನೇಮಿಸಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ವೆಬ್‍ಸೈಟ್ ಒಂದರಲ್ಲಿ ಸೆಕ್ಸ್ ಚಾಟ್ ನಡೆಸಿಯೂ ಕಮೀಷನ್ ಪಡೆಯುತ್ತಿದ್ದರು.

Advertisements
Exit mobile version