Connect with us

Latest

ರಕ್ಷಣಾ ಇಲಾಖೆ ವೆಬ್‍ಸೈಟ್ ಹ್ಯಾಕ್ – ಗೃಹ ಇಲಾಖೆಯ ವೆಬ್‍ಸೈಟ್ ಸ್ಥಗಿತ

Published

on

ನವದೆಹಲಿ: ರಕ್ಷಣಾ ಸಚಿವಾಲಯದ ವೆಬ್ ಸೈಟ್ ಶುಕ್ರವಾರ ಹ್ಯಾಕ್ ಆದ ಬೆನ್ನಲ್ಲೇ ಗೃಹ ಸಚಿವಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಗೃಹ ಇಲಾಖೆಯ ಜಾಲತಾಣವನ್ನು ರಕ್ಷಣಾ ದೃಷ್ಟಿಯಿಂದ ಸ್ಥಗಿತಗೊಳಿಸಿದ್ದು, ವೆಬ್‍ಸೈಟ್‍ಗೆ ಮಾಡಬೇಕಾದ ಎಲ್ಲಾ ಸೆಕ್ಯೂರಿಟಿ ಆಪ್ ಗ್ರೇಡ್‍ಗಳನ್ನು ಮಾಡಲಾಗುತ್ತಿದೆ ಎಂದು ಸರ್ಕಾರದ ಪರ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೃಹ ಇಲಾಖೆಯ ವೆಬ್‍ಸೈಟ್ ತೆರೆದ ವೇಳೆ ನೀವು ವಿನಂತಿಸಿದ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅಡಚಣೆಗಾಗಿ ಕ್ಷಮಿಸಿ, ಶೀಘ್ರದಲ್ಲಿಯೇ ಸೇವೆಯು ಪುನಾರಂಭವಾಗಲಿದೆ ಎಂಬ ಬರಹ ಕಾಣಿಸುತ್ತಿದೆ. ಇಲಾಖೆ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ ಇಲಾಖೆಯ ಜಾಲತಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಭದ್ರತಾ ವ್ಯವಸ್ಥೆಯನ್ನು ನವೀಕರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ರಕ್ಷಣಾ ಇಲಾಖೆ ವೆಬ್‍ಸೈಟ್ ಹ್ಯಾಕ್ ಆದ ಬಳಿಕ ಹೆಚ್ಚುವರಿ ಮುನ್ನೆಚ್ಚರಿಕೆಗಳ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಶೀಘ್ರವೇ ವೆಬ್‍ಸೈಟ್ ಪುನಾರಂಭಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.