Connect with us

International

6.5 ಕೋಟಿಗೆ ಮಾರಾಟವಾಯ್ತು ಡೋರ್ ಗಳಿಲ್ಲದ ಬಾತ್‍ರೂಂ ಇರೋ ಮನೆ..!

Published

on

ವಾಷಿಂಗ್ಟನ್: ನಾವು ಮನೆಗಳನ್ನು ನೋಡುವಾಗ ಶೌಚಾಯಲಯ ಹಾಗೂ ಪ್ರೈವೆಸಿಗೆ ಮೊದಲ ಆದ್ಯತೆ ನೀಡುತ್ತೇವೆ. ಆದರೆ ಇಲ್ಲೊಂದು ಮನೆಯ ಶೌಚಾಲಯಕ್ಕೆ ಬಾಗಿಲೇ ಇಲ್ಲ. ಆದರೂ ಈ ಮನೆ ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ.

ಅಮೆರಿಕದ ಬೋಸ್ಟನ್‍ನಲ್ಲಿರುವ ಈ ಮನೆಯ ಶೌಚಾಲಯಕ್ಕೆ ಬಾಗಿಲು ಹಾಗೂ ಗೋಡೆಗಳೇ ಇಲ್ಲ. ಕೇವಲ ಗಾಜುಗಳನ್ನು ಮಾತ್ರ ಇರಿಸಲಾಗಿದೆ. ಆದರೂ ಈ ಮನೆ ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ. 3 ಅಂತಸ್ತಿನ ಮನೆ ಇದಾಗಿದ್ದು, ನಾಲ್ಕು ಬೆಡ್ ರೂಮ್ ಹೊಂದಿದೆ. ಅಲ್ಲದೆ ಮನೆಯಲ್ಲಿ 3 ಬಾತ್‍ರೂಂಗಳಿವೆ. ಹಲವು ಬಾಲ್ಕನಿ, ಕಟ್ಟಿಗೆಯಿಂದ ಮಾಡಿದ ಫ್ಲೋರ್ ಹೊಂದಿದೆ. ಸುಮಾರು 2,001 ಚ.ಅಡಿಯ ದೊಡ್ಡದಾದ ಪಾರ್ಕಿಂಗ್ ಜಾಗವನ್ನು ಹೊಂದಿದೆ.

ಆರಂಭದಲ್ಲಿ ಹೊರಗಿನಿಂದ ನೋಡಿದಾಗ ಇತರೆ ಮನೆಗಳಂತೇ ಕಾಣುತ್ತದೆ. ಆದರೆ ಮನೆಯೊಳಗೆ ನೋಡಿದರೆ ಶೌಚಾಲಯಗಳಿಗೆ ಬಾಗಿಲು ಹಾಗೂ ಗೋಡೆಗಳೇ ಇಲ್ಲ. ಈ ಶೌಚಾಲಯದ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಓಪನ್ ಸ್ಪೇಸ್‍ನ ಎಡಭಾಗದಲ್ಲೇ ಇದ್ದು, ಬಾಗಿಲು ಮಾತ್ರವಲ್ಲ, ಗೋಡೆಗಳೂ ಇಲ್ಲ. ಕೇವಲ ಗಾಜುಗಳನ್ನು ಮಾತ್ರ ಅಳವಡಿಸಲಾಗಿದೆ. ಬಾತ್‍ಗಳು ಅಧುನಿಕ ವಿನ್ಯಾಸಗಳನ್ನು ಹೊಂದಿದ್ದು, ವಾಕ್ ಇನ್ ಶವರ್, ಟಾಯ್ಲೆಟ್ ಹಾಗೂ ಸಿಂಕ್‍ನ್ನು ಒಳಗೊಂಡಿವೆ.

 

View this post on Instagram

 

A post shared by Zillow Gone Wild (@zillowgonewild)

ಝಿಲ್ಲೋ ಗಾನ್ ವೈಲ್ಡ್ ಇನ್‍ಸ್ಟಾಗ್ರಾಮ್‍ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ರಿಯಲ್ ಎಸ್ಟೇಟ್ ವೆಬ್‍ಸೈಟ್ ಝಿಲ್ಲಾದಲ್ಲಿ ಈ ಫೋಟೋಗಳನ್ನು ಹಾಕಲಾಗಿದೆ. ಇದೀಗ ಈ ಫೋಟೋಗಳು ಸಖತ್ ವೈರಲ್ ಆಗಿವೆ.

Click to comment

Leave a Reply

Your email address will not be published. Required fields are marked *