Tuesday, 16th July 2019

Recent News

ಕಾಮಣ್ಣನ ಬದಲು ಪಬ್‍ಜಿ ಗೇಮ್, ಮಸೂದ್ ಪ್ರತಿಮೆ ದಹನ

ಮುಂಬೈ: ಹೋಳಿ ಹಬ್ಬದ ನಿಮಿತ್ತ ಕಾಮಣ್ಣನ ಪ್ರತಿಮೆ ದಹನ ಮಾಡುತ್ತಾರೆ. ಆದರೆ ಮುಂಬೈನ ವರ್ಲಿಯಲ್ಲಿ ಈ ಬಾರಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಆನ್‍ಲೈನ್ ಗೇಮ್ ಪಬ್‍ಜಿ ಪ್ರತಿಮೆಯನ್ನು ದಹನ ಮಾಡಿದ್ದಾರೆ.

ಮಸೂದ್ ಅಜರ್ ಪ್ರತಿಮೆಯ ಕೆಳಗೆ ಭಯೋತ್ಪಾದನೆ ಎಂದು ಬರೆಯಲಾಗಿದೆ. ಈ ಮೂಲಕ ಭಯೋತ್ಪಾದನೆ ಮಾಡುವ ಉಗ್ರರನ್ನು ಹತ್ಯೆ ಮಾಡಬೇಕು ಎನ್ನುವ ಸಂದೇಶವನ್ನು ಯುವಕರು ನೀಡಿದ್ದಾರೆ.

ಮುಂಬೈನ ಸಿನಿಯಾ ಕೊಲಿವಾಡಾ ಪ್ರದೇಶದ ಇಬ್ಬರು ಸಹೋದರರು, ಪಬ್‍ಜಿ ಗೇಮ್ ಪ್ರತಿಮೆಯನ್ನು ನಿರ್ಮಿಸಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪಬ್‍ಜಿ ಗೇಮ್ ನಿಂದಾಗಿ ಅನೇಕ ವಿದ್ಯಾರ್ಥಿಗಳು ಓದುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಯುವಕರು ದಿನದ ಹೆಚ್ಚಿನ ಸಮಯವನ್ನು ಪಬ್‍ಜಿ ಗೇಮ್ ಆಡುವುದರಲ್ಲಿಯೇ ಕಳೆಯುತ್ತಿದ್ದಾರೆ. ಹೀಗಾಗಿ ಕಾಮಣ್ಣನ ಮೂರ್ತಿಯ ಬದಲಾಗಿ ಪಬ್‍ಜಿ ಗೇಮ್ ಪ್ರತಿಮೆ ದಹನ ಮಾಡುವ ಮೂಲಕ ಗೇಮ್ ಬ್ಯಾನ್‍ಗೆ ಒತ್ತಾಯಿಸಲಾಗುತ್ತಿದೆ ಎಂದು ಅಮರ್ ಹಾಗೂ ಅಶೀಶ್ ವಿಠ್ಠಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *