Connect with us

Dharwad

ಹುಬ್ಬಳ್ಳಿಯಲ್ಲಿ ಮಾಸ್ಕ್ ಹಾಕಿಕೊಂಡ ಕಾಮ-ರತಿ

Published

on

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಆತಂಕ ಮನೆ ಮಾಡಿದ್ದು, ಇಷ್ಟಾದರೂ ಜನ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸಲು ನಗರದ ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಾಮ-ರತಿಯರಿಗೆ ಮಾಸ್ಕ್ ಹಾಕಲಾಗಿದೆ. ಈ ಮೂಲಕ ವಿಶೇಷವಾಗಿ ಹೋಳಿ ಹಬ್ಬ ಆಚರಿಸಲಾಗಿದೆ.

ನಗರದಲ್ಲಿ ರಂಗಪಂಚಮಿಯ ಅಂಗವಾಗಿ ಕಾಮ-ರತಿಯರ ದಹನ ಮಾಡಿದ್ದು, ಇದಕ್ಕಿಂತ ಪೂರ್ವದಲ್ಲಿ ಪ್ರಮುಖ ಸ್ಥಳದಲ್ಲಿ ಕೂರಿಸಿರುವ ಕಾಮ-ರತಿಯರ ಮುಖಕ್ಕೆ ಮಾಸ್ಕ್ ಹಾಕುವ ಮೂಲಕ ಜಾಗೃತಿ ಮೂಡಿಸಲಾಗಿದೆ.

ಹುಬ್ಬಳ್ಳಿಯ ಈ ವಿಶೇಷ ಕಾಮ-ರತಿಯರನ್ನು ಜನ ನೋಡುತ್ತಲೇ, ಕಿಸೆಯಲ್ಲಿದ್ದ, ವಾಹನದಲ್ಲಿದ್ದ ಮಾಸ್ಕ್ ನ್ನು ಬಳಕೆ ಮಾಡಲು ಮುಂದಾಗುತ್ತಿದ್ದಾರೆ. ಈ ಮೂಲಕ ದಹಿಸಲ್ಪಡುವ ಕಾಮ-ರತಿಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *