ಹೈದರಾಬಾದ್: ಬಾಹುಬಲಿ ಸಿನಿಮಾದ ರಾಜಮೌಳಿ ಮುಂದೆ ಯಾವ ಚಿತ್ರ ಮಾಡಲಿದ್ದಾರೆ ಎನ್ನುವ ಸಿನಿ ಅಭಿಮಾನಿಗಳ ಪ್ರಶ್ನೆಗೆ ಕೊನೆಗೆ ಅವರೇ ಉತ್ತರ ನೀಡಿದ್ದಾರೆ.
ಎರಡು ಬಾಹುಬಲಿ ಚಿತ್ರದ ಯಶಸ್ಸಿನ ನಂತರ ರಾಜಮೌಳಿ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಮೌನವಾಗಿದ್ದರು. ಸದ್ಯ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಎಳೆದಿರುವ ರಾಜಮೌಳಿ ತಮ್ಮ ಮುಂದಿನ ಎರಡು ಸಿನಿಮಾಗಳ ಕುರಿತು ಸಿನಿ ವೆಬ್ಸೈಟ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
Advertisement
ನನ್ನ ಮುಂದಿನ ಸಿನಿಮಾ ಸೋಶಿಯಲ್ ಡ್ರಾಮ ಕುರಿತ ಕತೆಯನ್ನು ಹೊಂದಿರುತ್ತದೆ. ಈ ಚಿತ್ರವನ್ನು ಟಾಲಿವುಡ್ ನಿರ್ಮಾಪಕ ದಾನಯ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
ಈ ಹಿಂದೆ ದಾನಯ್ಯ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ `ದೇಶಮುದುರು’, `ಕ್ಯಾಮಾರಮೆನ್ ಗಂಗಾತೋ ರಾಮ್ಬಾಬು’ ಸಿನಿಮಾಗಳು ಹೆಚ್ಚು ಜನಪ್ರಿಯವಾಗಿದ್ದವು. ಪ್ರಸ್ತುತ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮುಂದಿನ ಚಿತ್ರ `ಭರತ್ ಅನೇ ನೇನು’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಚಿತ್ರದ ನಾಯಕ-ನಾಯಕಿ ಯಾರು? ಎಷ್ಟು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತದೆ? ತಾರಾಗಣದ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ.
Advertisement
ದಾನಯ್ಯ ಅವರ ನಿರ್ಮಾಣದಲ್ಲಿ ಸಿನಿಮಾ ಮುಕ್ತಾಯವಾದ ನಂತರ ರಾಜಮೌಳಿ, ಸೂಪರ್ ಸ್ಟಾರ್ ಮಹೇಶ್ಬಾಬು ಅವರ ಜೊತೆ ಸಿನಿಮಾ ಮಾಡುವುದು ಖಚಿತವಾಗಿದೆ. ಈ ಚಿತ್ರವನ್ನು ಕೆ.ಎಲ್. ನಾರಾಯಣ ಅವರು ನಿರ್ಮಾಣ ಮಾಡಲಿದ್ದಾರೆ. ಚಿತ್ರದ ಶೂಟಿಂಗ್ 2019ರ ಆರಂಭವಾಗುವ ಸಂಭವವಿದೆ. ಈ ಹಿಂದೆ `ಕ್ಷಣ ಕ್ಷಣಂ’, `ಹಲೋ ಬ್ರಾದರ್’, ಮತ್ತು `ರಾಖಿ’ದಂತಹ ಯಶಸ್ವಿ ಸಿನಿಮಾಗಳನ್ನು ಕೆ.ಎಲ್. ನಾರಾಯಣ ನಿರ್ಮಾಣ ಮಾಡಿದ್ದರು.
Advertisement