Connect with us

Districts

ಕುಡಿದ ಅಮಲಿನಲ್ಲಿ ಈಜಲು ತೆರಳಿದ್ದ ಹೆಲ್ತ್ ಇನ್ಸ್‌ಪೆಕ್ಟರ್‌ ಸಾವು

Published

on

ರಾಮನಗರ: ಕುಡಿದ ಅಮಲಿನಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಹೆಲ್ತ್ ಇನ್ಸ್‌ಪೆಕ್ಟರ್‌ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಮಾಗಡಿಯ ತಾಲೂಕಿನ ಬೈಚಾಪುರ ಗ್ರಾಮದ ನಿವಾಸಿ ಶಂಕರ್ (32) ಮೃತಪಟ್ಟ ಹೆಲ್ತ್ ಇನ್ಸ್‌ಪೆಕ್ಟರ್‌. ಇವರು ಬಿಡದಿಯ ಅರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ನಾಲ್ಕು ಜನ ಸ್ನೇಹಿತರೊಂದೊಂದಿಗೆ ಮದ್ಯ ಸೇವಿಸಿದ ಶಂಕರ್, ಬುಧವಾರ ಸಾಯಂಕಾಲ ರಾಮನಗರದ ಸಿಂಗ್ರಬೋವಿ ದೊಡ್ಡಿಯಲ್ಲಿನ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಈಜುತ್ತಿದ್ದ ಶಂಕರ್ ಅವರ ಕಾಲಿಗೆ ಬಳ್ಳಿ ಸುತ್ತಿಕೊಂಡು ಈಜಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕರ್ ಜೊತೆ ಇದ್ದ ಮೂವರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ.