ಸಿದ್ದರಾಮಯ್ಯರೊಂದಿಗೆ ಭಿನ್ನಾಭಿಪ್ರಾಯವಿಲ್ಲ – ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿದ ರೇವಣ್ಣ

ಹಾಸನ: ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉತ್ತಮ ಯೋಜನೆಗಳನ್ನು ಜಾರಿ ಮಾಡಿದ್ದರು. ಅವರ ನನ್ನ ನಡುವಿನ ಬಾಂಧವ್ಯ ಬಹಳ ಕಾಲದಿಂದಲೂ ಮುಂದುವರಿದಿದ್ದು, ಸಿದ್ದರಾಮಯ್ಯರೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮಾಜಿ ಸಚಿವ ರೇವಣ್ಣ ಅವರು ಹೇಳಿದ್ದಾರೆ.

ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮುದಾಯಗಳನ್ನು ಗುರುತಿಸಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ನಾವಿಬ್ಬರೂ ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಕೂಡ ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ರಾಜಕೀಯವೇ ಬೇರೆ ವೈಯಕ್ತಿಕ ಜೀವನವೇ ಬೇರೆಯಾಗಿದ್ದು, ನಾನು ಅವರ ಕುರಿತು ಎಂದು ಸಣ್ಣದಾಗಿ ಮಾತನಾಡುವುದಿಲ್ಲ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಹಳ ಜನ ಸಿದ್ದರಾಮಯ್ಯ ಆ ಜಾತಿ, ಈ ಜಾತಿ ವಿರೋಧಿ ಎನ್ನುತ್ತಾರೆ. ಆದರೆ ನಾನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಹಾಕಿಸಿದ್ದೇನೆ. ಕೆಂಪೇಗೌಡ ಜಯಂತಿ, ಕೆಂಪೇಗೌಡ ಪ್ರಾಧಿಕಾರ ರಚನೆ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಇವುಗಳನ್ನು ಬೇರೆ ಯಾರು ಮಾಡಲಿಲ್ಲ ಎಂದು ಯಾರು ಕೇಳುವುದಿಲ್ಲ. ಇತಿಹಾಸ ಮಹಾಪುರುಷರು ಸದಾ ನೆನಪಿನಲ್ಲಿರಬೇಕು, ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಎಂದು ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ ವಿನಃ ಪ್ರತ್ಯೇಕ ಧರ್ಮ ಮಾಡುವ ಕೆಲಸ ನಾನು ಮಾಡಿಲ್ಲ. ಆದರೂ ನನ್ನ ವಿರುದ್ಧ ಪ್ರತ್ಯೇಕ ಧರ್ಮ ಮಾಡಿದ ಎಂದು ಅಪಪ್ರಚಾರ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು ಎಂದು ಹೇಳಿದರು.

Leave a Reply

Your email address will not be published. Required fields are marked *