Connect with us

Chikkamagaluru

ಹಾವೇರಿಯಿಂದ ಟ್ರ್ಯಾಕ್ಟರ್ ತರಿಸಿಕೊಂಡು ಊರಿಗೆ ವಾಪಸ್ ಹೋದ ಕಾರ್ಮಿಕರು

Published

on

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ-ಮೆಣಸು ಕೊಯ್ಯಲು ಹಾವೇರಿಯಿಂದ ಬಂದಿದ್ದ ಕೂಲಿ ಕಾರ್ಮಿಕರು ಸ್ವಂತ ಜಿಲ್ಲೆ ಹಾವೇರಿಯಿಂದ ಟ್ರ್ಯಾಕ್ಟರ್ ತರಿಸಿಕೊಂಡು ತಮ್ಮ ಊರಿಗೆ ಹಿಂದಿರುಗಿದ್ದಾರೆ.

ಕೂಲಿ ಕೆಲಸಕ್ಕಾಗಿ ಹಾವೇರಿಯಿಂದ ಜಿಲ್ಲೆ ಮೂಡಿಗೆರೆ ತಾಲೂಕಿಗೆ ಬಂದಿದ್ದರು. ಆದರೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಶಂಕಿತರ ಸಂಖ್ಯೆ ಮೀತಿ ಮೀರುತ್ತಿರುವುದರಿಂದ ದೇಶವೇ ಲಾಕ್‍ಡೌನ್ ಆದ ಹಿನ್ನೆಲೆ ಕಾರ್ಮಿಕರು ಅತಂತ್ರಕ್ಕೀಡಾಗಿದ್ದಾರೆ.

ದೇಶವೇ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಕಾಫಿ ತೋಟದಲ್ಲಿ ಕೆಲಸ ಕೂಡ ನಿಂತಿದೆ. ಹಾಗಾಗಿ ಅವರು ತಮ್ಮ ಊರಿಗೆ ಹಿಂದಿರುಗಲು ಸ್ಥಳಿಯ ಗಾಡಿಗಳನ್ನು ಬಾಡಿಗೆ ಕೇಳಿದ್ದಾರೆ. ಆದರೆ ದೇಶ ಕಫ್ರ್ಯೂ ಮಾದರಿಯ ಲಾಕ್‍ಡೌನ್ ಆಗಿರುವುದರಿಂದ ಯಾವ ವಾಹನದವರು ಹಾವೇರಿಗೆ ಬಾಡಿಗೆ ಬರಲು ನಿರಾಕರಿಸಿದ್ದಾರೆ.

ಹಾಗಾಗಿ ನಾವು 21 ದಿನ ಇಲ್ಲೇ ಇರುವುದು ಕಷ್ಟವೆಂದು ಕೂಲಿ ಕಾರ್ಮಿಕರು ಹಾವೇರಿಯಿಂದ ಟ್ರ್ಯಾಕ್ಟರ್ ತರಿಸಿಕೊಂಡು ಗಂಟು-ಮೂಟೆ ಸಮೇತ ಲಗೇಜ್ ಪ್ಯಾಕ್ ಮಾಡಿಕೊಂಡು ತಮ್ಮ ಊರಿಗೆ ಹಿಂದಿರುಗಿದ್ದಾರೆ.