Tuesday, 18th February 2020

ಎನ್‍ಸಿಸಿ ಪರೇಡ್ ವೇಳೆ ಹೆಜ್ಜೇನು ದಾಳಿ – 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಹಾವೇರಿ: ಎನ್‍ಸಿಸಿ ಪರೇಡ್ ಮಾಡುವಾಗ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಹಾವೇರಿ ನಗರದ ಜಿ.ಎಚ್.ಕಾಲೇಜಿನಲ್ಲಿ ನಡೆದಿದೆ.

ಹೆಜ್ಜೇನು ದಾಳಿ ಮಾಡಿದ ಕೂಡಲೇ 20 ಕ್ಕೂ ಅಧಿಕ ಗಾಯಾಳು ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ವಿದ್ಯಾರ್ಥಿಗಳ ಮೈ ಕೈ, ತುಟಿ ಹಾಗೂ ಕಾಲು ಎಲ್ಲಾ ಕಡೆ ಹೆಜ್ಜೇನು ಕಚ್ಚಿ ಗಾಯಗೊಳಿಸಿವೆ. ಹೆಚ್ಚಿನ ಬಿಸಿಲಿನ ತಾಪಕ್ಕೆ ಹೆಜ್ಜೇನು ಎದ್ದಿವೆ ಎನ್ನಲಾಗಿದೆ. ಕಾಲೇಜು ಆವರಣದ ಪಕ್ಕದಲ್ಲಿ ಎನ್‍ಸಿಸಿ ಪರೇಡ್ ಮಾಡುವಾಗ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ.

ಕೆಲವು ವಿದ್ಯಾರ್ಥಿಗಳು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ನಂತರ ಕಾಲೇಜು ಸಿಬ್ಬಂದಿ ಹಾಗೂ ಆಡಳಿತ ವರ್ಗ ಕಟ್ಟಡದಲ್ಲಿರುವ ಹೆಜ್ಜೇನು ಅನ್ನು ತೆರವುಗೊಳಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಗಳ ಪೋಷಕರು ಆಗಮಿಸಿ ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *