Thursday, 17th October 2019

Recent News

ಪತ್ನಿಗೆ ಫೋನ್ ಮಾಡಿ ಅನುಮಾನಾಸ್ಪದ ರೀತಿ ಪ್ರಾಣಬಿಟ್ಟ

ಹಾವೇರಿ: ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕು ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾವೇರೆಪ್ಪ ಮಾಗೋಡ (45) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿ. ಹಾವೇರೆಪ್ಪ ಮಾಗೋಡ ಒಂದು ವಾರದ ಹಿಂದೆ ಏಕಾಏಕಿ ಮನೆಬಿಟ್ಟು ಹೋಗಿದ್ದ. ಆದರೆ ಪತ್ನಿ ಜ್ಯೋತಿಗೆ ಫೋನ್ ಮಾಡಿ ಮಾತನಾಡುತ್ತಿದ್ದ. ಭಾನುವಾರ ರಾತ್ರಿ 9 ಗಂಟೆಗೆ ಕೊನೆಯದಾಗಿ ಫೋನ್ ಮಾಡಿ ಮಾತನಾಡಿದ್ದ ಎಂದು ತಿಳಿದು ಬಂದಿದೆ.

ಇಂದು ಚಿಕ್ಕಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಾವೇರೆಪ್ಪನ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಆವರಣದಲ್ಲಿ ಇಂತಹ ಘಟನೆ ನಡೆದಿದ್ದು ವಿದ್ಯಾರ್ಥಿಗಳಲ್ಲಿ ಭಯವನ್ನು ಉಂಟು ಮಾಡಿದೆ.

ಹಾವೇರೆಪ್ಪ ಮಾಗೋಡ ಮೃತ ದೇಹದಿಂದ ಕ್ರಿಮಿನಾಶಕದ ವಾಸನೆ ಬರುತ್ತಿತ್ತು. ಘಟನಾ ಸ್ಥಳದಲ್ಲಿ ಮದ್ಯದ ಪೌಚ್ ಬಿದ್ದಿತ್ತು. ಹೀಗಾಗಿ ಭಾನುವಾರ ರಾತ್ರಿ ಮದ್ಯದಲ್ಲಿ ಕ್ರಿಮಿನಾಶಕ ಮಿಶ್ರಣ ಮಾಡಿ ಸೇವಿಸಿದ್ದಾನೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಹಾವೇರೆಪ್ಪನ ಪತ್ನಿ ಜ್ಯೋತಿ ಬೇರೊಬ್ಬನ ಜೊತೆಗೆ ಅಕ್ರಮಸಂಬಂಧ ಹೊಂದಿದ್ದಾಳೆ. ಹೀಗಾಗಿ ಅವಳೇ ಗಂಡನನ್ನ ಕೊಲೆ ಮಾಡಿಸಿದ್ದಾಳೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಈ ಕುರಿತು ಹಾವೇರಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *