Connect with us

Crime

ತಾವರೆ ಹೂವು ಕೀಳಲು ಹೋಗಿದ್ದ 28 ವರ್ಷದ ಯುವಕ ಸಾವು

Published

on

ಹಾವೇರಿ: ಕೆರೆಯ ಬಳಿ ತಾವರೆ ಹೂವು ಕೀಳಲು ಹೋಗಿದ್ದ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಸುರಳೇಶ್ವರ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನ್ನ ರಿಯಾಜ್ ಮುಲ್ಲಾ 28 ವರ್ಷ ವಯಸ್ಸು ಎಂದು ಗುರುತಿಸಲಾಗಿದೆ. ಮೃತ ರಿಯಾಜ್, ಹಾವೇರಿ ನಗರದ ಶಾಂತಿನಗರದ ನಿವಾಸಿ ಎನ್ನಲಾಗಿದೆ. ಸುರಳೇಶ್ವರ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.

ಕೆರೆಯಲ್ಲಿದ್ದ ತಾವರೆ ಹೂವು ಕೀಳಲು ಹೋಗಿದ್ದಾಗ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಯುವಕನ ಮೃತದೇಹ ಹೊರತೆಗೆದಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.