Crime
ಆಗತಾನೇ ಹುಟ್ಟಿದ ಹೆಣ್ಣು ಶಿಶುವಿನ ಶವ ನೀರಿನ ಹೊಂಡದಲ್ಲಿ ಪತ್ತೆ

ಹಾವೇರಿ: ಜಿಲ್ಲೆ ಸವಣೂರು ಪಟ್ಟಣದ ಹೊರವಲಯದ ಇಸ್ಲಾಂಪುರ ಬಳಿ ಇರುವ ನೀರಿನ ಹೊಂಡದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಸೋಮವಾರ ಸಂಜೆ ಆಗತಾನೇ ಜನಿಸಿರುವ ಹೆಣ್ಣು ಶಿಶುವನ್ನ ಯಾರೋ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಹೊಂಡದಲ್ಲಿ ನೀರಿನಲ್ಲಿ ಶಿಶುವನ್ನ ಎಸೆದು ಹೋಗಿದ್ದರಿಂದ ಶಿಶು ಮೃತಪಟ್ಟಿದೆ.
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದರು. ಆಗತಾನೆ ಜನಿಸಿದ ಹೆಣ್ಣು ಶಿಶುವನ್ನ ಹೊಂಡದಲ್ಲಿ ಎಸೆದು ಹೋಗಿರೋ ದುಷ್ಕರ್ಮಿಗಳನ್ನ ಪತ್ತೆ ಮಾಡಿ ತಕ್ಕ ಶಿಕ್ಷೆ ನೀಡಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.
ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
