Crime
ಆ್ಯಸಿಡ್ ಹಾಕುವ ಬೆದರಿಕೆ- ಒಂದು ವರ್ಷದಿಂದ ನಿರಂತರ ಅತ್ಯಾಚಾರ

– ಕಾಂಗ್ರೆಸ್ ಮಾಜಿ ನಗರಸಭೆ ಸದಸ್ಯ ಅರೆಸ್ಟ್
ಹಾವೇರಿ: ಆ್ಯಸಿಡ್ ಎರಚುವ ಬೆದರಿಕೆ ಹಾಕಿ ವಿವಾಹಿತ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಹಾವೇರಿ ನಗರಸಭೆ ಮಾಜಿ ಸದಸ್ಯನನ್ನ ಪೊಲೀಸರು ಬಂಧಿಸಿದ್ದಾರೆ.
55 ವರ್ಷದ ಮಲ್ಲೇಶಪ್ಪ ಪಟ್ಟಣಶೆಟ್ಟಿ ಬಂಧಿತ ಆರೋಪಿ. ಮಲ್ಲೇಶಪ್ಪ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದು, ಹಿಂದೆ ನಗರಸಭೆಯ ಸದಸ್ಯ ಸಹ ಆಗಿದ್ದನು. ಹಣ, ಮನೆ ಕೊಟ್ಟಿದ್ದೇನೆ, ಸಹಕರಿಸದಿದ್ರೆ ಆ್ಯಸಿಡ್ ಹಾಕ್ತೀನಿ ಎಂದು ಮಹಿಳೆಯನ್ನ ಮಲ್ಲೇಶಪ್ಪ ಹೆದರಿಸಿ ಕಳೆದ ಒಂದು ವರ್ಷದಿಂದ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿವೆ.
ಇಂದು ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅಸ್ವಸ್ಥ 40 ವರ್ಷದ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
