Crime
ದೇವಾಲಯದ ಬೀಗ ಒಡೆದು ಹಣ, ಚಿನ್ನಾಭರಣ ಕಳ್ಳತನ

– ಪೂಜೆಗೆ ಬಾಗಿಲು ತೆರೆದಾಗ ಕಳ್ಳತನ ಬಯಲು
ಹಾಸನ: ದೇವಾಲಯದ ಬೀಗ ಒಡೆದು ಹುಂಡಿಯ ಹಣ ಮತ್ತು ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರವ ಘಟನೆ ಹಾಸನ ಜಿಲ್ಲೆಯ ಮೂಡಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಶ್ರೀ ಶಿವ ಪಾರ್ವತಿ ದೇಗುಲದಲ್ಲಿ ಕಳ್ಳರು ಹಣ ಮತ್ತು ಆಭರಣವನ್ನು ಕಳವು ಮಾಡಿದ್ದಾರೆ. ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು, ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಮಂಗಳವಾರ ತಡರಾತ್ರಿ ದೇಗುಲದ ಬಾಗಿಲಿನ ಬೀಗ ಮುರಿದು ದೇವಸ್ಥಾನದ ಒಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ದೇಗುಲದ ಅರ್ಚಕರು ಪೂಜಾಕಾರ್ಯಕ್ಕೆ ತೆರಳಿದ್ದಾಗ ದೇವಸ್ಥಾನ ಬೀಗ ಹೊಡೆದು ಹಾಕಿರುವುದನ್ನು ಕಂಡು, ಸ್ಥಳೀಯ ನಿವಾಸಿಗಳಿಗೆ ವಿಷಯ ತಿಳಿಸಿದ್ದಾರೆ. ಆಗ ದೇವಸ್ಥಾನದಲ್ಲಿ ಕಳ್ಳತನವಾಗಿರುವದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿನಿ ನೀಡಿದ್ದಾರೆ. ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
