Connect with us

Corona

ರಾತ್ರೋರಾತ್ರಿ ಗುಂಪು ಸೇರಿದ ಯುವಕರು – ಪ್ರಶ್ನಿಸಿ ಗದರಿಸಿದ್ದಕ್ಕೆ ಕಾಲ್ಕಿತ್ತರು

Published

on

– ನಮಗೆ ಕೊರೊನಾ ಬರಲ್ಲ ಎಂದು ಉಡಾಫೆ

ಹಾಸನ: ರಾತ್ರೋರಾತ್ರಿ ಗುಂಪು ಸೇರಿದ ಯುವಕರನ್ನು ಸ್ಥಳೀಯರು ಪ್ರಶ್ನೆ ಮಾಡಿ ಗದರಿಸಿ ವಾಪಸ್ ಕಳಿಸಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ನಗರದ ಮುಜಾವರ್ ಮೊಹಲ್ಲಾ ಬಡಾವಣೆಯಲ್ಲಿ ನಡೆದಿದೆ.

ಕೊರೊನಾ ಭಯದಿಂದ ದೇಶ ಲಾಕ್‍ಡೌನ್ ಆಗಿದೆ. ಗುಂಪಾಗಿ ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಮನವಿ ಮಾಡಿಕೊಳ್ಳುತ್ತದೆ. ಆದರೆ ಅರಸೀಕೆರೆ ನಗರದಲ್ಲಿ 20 ಜನ ಯುವಕರು ಒಟ್ಟಿಗೆ ಸೇರಿಕೊಂಡಿದ್ದರು. ಇವರನ್ನು ಪ್ರಶ್ನಿಸಿದರೆ ನಾವು ನಮಾಜ್ ಮಾಡಲು ಬಂದಿದ್ದೇವೆ. ನಮಗೆ ಕೊರೊನಾ ಬರಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಇದರಿಂದ ಕೋಪಗೊಂಡ ಸ್ಥಳೀಯ ಯುವಕನೋರ್ವ ವಿಡಿಯೋ ಮಾಡುತ್ತಾ ತಕ್ಷಣ ಇಲ್ಲಿಂದ ತೆರಳಿ. ಇಲ್ಲದಿದ್ದರೆ ಪೊಲೀಸರಿಗೆ ಫೋನ್ ಮಾಡಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾನೆ. ಜೊತೆಗೆ ಕೊರೊನಾ ಕರ್ಫ್ಯೂ ಇರುವುದರಿಂದ ಗುಂಪಾಗಿ ಸೇರಬಾರದು ಎಂಬುದು ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾನೆ. ಯುವಕನ ಪ್ರಶ್ನೆಗೆ ಹೆದರಿದ ಯುವಕರು ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.