Connect with us

Districts

ಈಗ ಒಂದು ರಾಜ್ಯ ಬಿಟ್ಟರೆ ಕಾಂಗ್ರೆಸ್ ಎಲ್ಲಿದೆ – ಕಾರಜೋಳ ಪ್ರಶ್ನೆ

Published

on

ಹಾಸನ: ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದು ಮೋದಿ ಹೇಳಿದಾಗ ಎಲ್ಲರೂ ಹಾಸ್ಯ ಮಾಡಿದ್ದರು. ಆದರೆ ಇವತ್ತು ಕಾಂಗ್ರೆಸ್ ಮುಕ್ತ ದೇಶವಾಗಿದೆ. ಈಗ ಒಂದು ರಾಜ್ಯ ಬಿಟ್ಟರೆ ಕಾಂಗ್ರೆಸ್ ಎಲ್ಲಿದೆ ಎಂದು ಲೋಕೊಪಯೋಗಿ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ, ನಂತರ ಅಡ್ವಾಣಿ, ನಂತರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಪಕ್ಷ ಹೆಮ್ಮರವಾಗಿ ಬೆಳೆದಿದೆ ಕುಮಾರಸ್ವಾಮಿ ಹೇಳಿಕೆ ಯೋಗ್ಯವಾದಂತಹದ್ದಲ್ಲ ಎಂದು ಹೇಳಿದರು.

ಇಡೀ ದೇಶದಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆದಿದೆ. ನರೇಂದ್ರ ಮೋದಿ ಕಾಲದಲ್ಲಿ 23 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ, ಇಂದು ಐದು ರಾಜ್ಯಗಳಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗಲಿದ್ದು, ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ನಾನು ನೋಡದ ಬಿಜೆಪಿ ಸರ್ಕಾರ, ನನ್ನಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.

ಇದೇ ವೇಳೆ ಸಚಿವ ಸುಧಾಕರ್ ವಿರುದ್ಧ ಶಾಸಕ ರೇಣುಕಾಚಾರ್ಯ ಅಸಮಾಧಾನ ವಿಷಯ ಕುರಿತು ಪ್ರತಿಕ್ರಿಯಿಸಿದ ಅವರು ಬಿಜೆಪಿಯಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ಗೊಂದಲವಿಲ್ಲ. ಸಂಕಷ್ಟದ ನಡುವೆಯೂ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮವಾದ ಆಡಳಿತ ನೀಡಿದೆ. ಅಸಮಾಧಾನವಿದ್ದರೆ, ಕೆಲಸಗಳಲ್ಲಿ ತೊಂದರೆಯಿದ್ದರೆ ಸಿಎಂ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಲಿ, ಅದನ್ನು ಬಿಟ್ಟು ಮಾಧ್ಯಮದವರ ಮುಂದೆ ಹೋಗಬಾರದೆಂದು ಪಕ್ಷದ ಶಾಸಕರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.

Click to comment

Leave a Reply

Your email address will not be published. Required fields are marked *