Connect with us

Districts

ನನ್ನನ್ನ ಜೈಲಿಗೆ ಹಾಕಲಿ, ಅಲ್ಲಿ ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರೆ: ರೇವಣ್ಣ

Published

on

ಹಾಸನ: ನನ್ನನ್ನು ಜೈಲಿಗೆ ಹಾಕಲಿ, ನಾನು ಹೋರಾಟ ಮಾಡುತ್ತೇನೆ. ಜೈಲಿನಲ್ಲೇ ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಉಪಚುನಾವಣೆ ಕಳೆದ ಬಳಿಕ ಕೆಇಬಿ ಬಿಲ್ ಹೆಚ್ಚು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂಬಾನಿ ಕಂಪನಿಗೆ ಕೊಡಲಾಗಿದೆ. ಇನ್ನೂ ಈ ಕೆಇಬಿಯನ್ನ ಯಾವ ಕಂಪನಿಗೆ ಮಾರಾಟ ಮಾಡ್ತಾರೋ ಗೊತ್ತಿಲ್ಲಾ ಎಂದು ರೇವಣ್ಣ ಅವರು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ನಾಚಿಕೆಯಾಗಬೇಕು ಇದೊಂದು ಸರ್ಕಾರ ಅಂತಾರೇನ್ರೀ. ಪ್ರತೀ ಯೂನಿಟ್‍ಗೆ 40 ಪೈಸೆ ಅಂದರೆ ಎಷ್ಟು ಹಣವಾಗುತ್ತೆ ಹೇಳಿ. ರಾಜ್ಯದಲ್ಲಿ ರಾಜಕೀಯ ದ್ವೇಷ ಹೆಚ್ಚಾಗಿದೆ ರಾಜಕೀಯ ದುರುದ್ದೇಶ ಹೆಚ್ಚಾಗಿದೆ. ಇದು ಬಿಜೆಪಿಗೇ ತಿರುಗುಬಾಣವಾಗಲಿದೆ. ವಿಪಕ್ಷಗಳನ್ನ ಹತ್ತಿಕ್ಕಲು ದುರುದ್ದೇಶದಿಂದ ನಾಲ್ಕು ವರ್ಷದ ಹಿಂದಿನ ಕೇಸ್ ನ್ನು ಮತ್ತೆ ರೀಓಪನ್ ಮಾಡಿದ್ದಾರೆ. ತನಿಖಾ ಸಂಸ್ಥೆಗಳನ್ನ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನೀರಾವರಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ಬೇಕಾಗುತ್ತದೆ. ನನ್ನನ್ನ ಜೈಲಿಗೆ ಹಾಕಲಿ ನಾನು ಹೋರಾಟ ಮಾಡುತ್ತೇನೆ ಜೈಲಿನಲ್ಲೇ ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರೆ ಎಂದರು.

ರಾಜ್ಯದ ಐದು ಕೆಇಬಿ ಕಂಪನಿಗಳಿಂದ 7996 ಕೋಟಿ ನಷ್ಟವಿದೆ ಎಂದು ಕೆಆರ್ ಸಿ ಕಂಪನಿಗಳು ಅರ್ಜಿ ಹಾಕಿದ್ದಾರೆ. ಈ ಕಂಪನಿಗಳು ಈ ಹಣ ಭರಿಸುವಂತೆ ಸರ್ಕಾರಕ್ಕೆ ಅರ್ಜಿ ಹಾಕಿದ್ದಾರೆ. ಈ ನಷ್ಟ ಸರಿದೂಗಿಸಲು ನಮ್ಮ ರೈತರನ್ನ ಸಂಕಷ್ಟಕ್ಕೆ ತಂದೊಡ್ಡಿದೆ. ಪ್ರತೀ ಯೂನಿಟ್ ಗೆ 40 ಪೈಸೆ ಹೆಚ್ಚು ಮಾಡಿದ್ದಾರೆ. ರಾಜ್ಯದ ಇಂಧನ ಇಲಾಖೆಯಲ್ಲಿ ಇದೊಂದು ದುರದೃಷ್ಟಕರ. ಜನ ಸಾಮಾನ್ಯರ ಮೇಲೆ ಹೊರೆ ಬೀಳುತ್ತಿದೆ ಎಂದು ಕಿಡಿಕಾರಿದರು.

ನಾನು ಇಂಧನ ಸಚಿವನಾಗಿದ್ದಾಗ ಬೆಸ್ಕಾಂನಲ್ಲಿ 600 ಕೋಟಿ ಹಣ ಎಫ್ ಡಿ ಇಟ್ಟಿದ್ದೆ. ರೈತರಿಗೆ ಒಂದೊಂದು ವಿದ್ಯುತ್ ಟಿಸಿ ಹಾಕಲು 18 ಸಾವಿರ ಜೊತೆಗೆ ಲಂಚ ಸೇರಿ 40 ಸಾವಿರ ಹಣ ತಗೊಳ್ತಿದ್ದಾರೆ. ಕೆಇಬಿ ಕಂಟ್ರಾಕ್ಟರ್ ಗಳ ಬಾಕಿ ಬಿಲ್ ಎರಡರಿಂದ ಮೂರು ಸಾವಿರ ಬಾಕಿ ಇದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

48 ಸಾವಿರ ಕುಟುಂಬಕ್ಕೆ ವೃದ್ಧಾಪ್ಯ ವೇತನ ಬಂದಿಲ್ಲ. ಈ ಸರ್ಕಾರ ಲೂಟಿಕೋರರ ಸರ್ಕಾರ. ಕೆಲ ಗುತ್ತಿಗೆದಾರರು ಅವರ ಹೆಂಡತಿಯ ತಾಳಿ ಮಾರಾಟ ಮಾಡ್ತಿದ್ದಾರೆ. ಪ್ರಧಾನಿ ಮೋದಿಯವರೇ ನಮ್ಮದು 10 ಪರ್ಸೆಂಟ್ ಸರ್ಕಾರ ಅಂತ ಹೇಳ್ತಿದ್ರೀ. ಈಗ ರಾಜ್ಯದಲ್ಲಿರುವ ನಿಮ್ಮದು ಯಾವ ಸರ್ಕಾರ ಹೇಳಿ ಎಂದು ಪ್ರಧಾನಿ ವಿರುದ್ಧ ಟೀಕೆ ಮಾಡಿದರು. ಇದೇ ವೇಳೆ ಹಾಸನಾಂಬ ದೇವಿ ರಾಜ್ಯದಲ್ಲಿನ ಭ್ರಷ್ಟಾಚಾರ ತೊಲಗಿಸಲಿ, ರಾಜ್ಯದ ಜನ್ರಿಗೆ ಒಳ್ಳೆಯದು ಮಾಡಲಿ ಎಂದು ಮಾಜಿ ಸಚಿವರು ಆಶಿಸಿದರು.

Click to comment

Leave a Reply

Your email address will not be published. Required fields are marked *