Connect with us

Districts

ಹಳ್ಳಿಯೊಳಗೆ ನುಗ್ಗಿದ ಒಂಟಿ ಸಲಗ – ಆತಂಕದಲ್ಲಿ ಗ್ರಾಮಸ್ಥರು

Published

on

ಹಾಸನ: ಗ್ರಾಮದೊಳಕ್ಕೆ ನುಗ್ಗಿದ ಒಂಟಿ ಸಲಗವೊಂದು ಆತಂಕ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಮಠಸಾಗರದಲ್ಲಿ ನಡೆದಿದೆ.

ಗ್ರಾಮದಲ್ಲಿ ಪದೇ ಪದೇ ಕಾಡಾನೆ ಹಾವಳಿ ಕಂಡು ಬರುತ್ತಿದೆ. ಈ ಹಿಂದೆಯೂ ಕೂಡ ಕಾಡಾನೆ ಊರೊಳಗೆ ಬಂದು ಆತಂಕ ಸೃಷ್ಟಿಸಿತ್ತು. ಸಕಲೇಶಪುರ ತಾಲೂಕಿನ ಹಲವೆಡೆ ಪದೇ ಪದೇ ಕಾಡಾನೆ ಹಾವಳಿ ಕಂಡು ಬರುತ್ತಿದೆ. ಕಾಫಿ, ಮೆಣಸು ಸೇರಿದಂತೆ ಇನ್ನಿತರ ಬೆಳೆಗಳನ್ನು ಹಾನಿ ಮಾಡುತ್ತಿದೆ.

ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನ ಆಗುತ್ತಿಲ್ಲ. ಗ್ರಾಮದೊಳಗೆ ಪದೇ ಪದೇ ಕಾಡಾನೆ ನುಗ್ಗುತ್ತಿರುವುದು ಜನಸಾಮಾನ್ಯರ ಪ್ರಾಣಕ್ಕೆ ಸಂಚಕಾರ ತರಲಿದೆ. ಹೆಚ್ಚಿನ ಅನಾಹುತ ಆಗುವ ಮುಂಚೆ ಕಾಡಾನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *