Crime
ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಗೃಹಿಣಿಯನ್ನು ಕೊಲೆಗೈದ ವಿವಾಹಿತ!
– ಮಹಿಳೆಯನ್ನು ಅಡ್ಡಗಟ್ಟಿ ಕೊಚ್ಚಿ ಕೊಂದ
ಹಾಸನ: ಮದುವೆಯಾಗುವಂತೆ ಪೀಡಿಸಿ ಗೃಹಿಣಿಯನ್ನು ಕೊಲೆಗೈದ ಘಟನೆಯೊಂದು ಹಾಸನ ತಾಲೂಕಿನ ಚಿಕ್ಕ ಬೂವನಹಳ್ಳಿ ಬಳಿ ನಡೆದಿದೆ.
ಗಾಯತ್ರಿ (30) ಕೊಲೆಯಾದ ಮಹಿಳೆ. ಈ ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸಿ ಮಂಜುನಾಥ್ ಬೆನ್ನು ಬಿದ್ದಿದ್ದ. ಮಕ್ಕಳನ್ನು ಬಿಟ್ಟು ತನ್ನೊಟ್ಟಿಗೆ ಬರುವಂತೆ ಒತ್ತಡ ಹಾಕಿದ್ದನು. ಆದರೆ ಇದಕ್ಕೆ ಗಾಯತ್ರಿ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಕೆಲಸಕ್ಕೆ ಹೋಗಿದ್ದ ಗಾಯತ್ರಿಯನ್ನು ಅಡ್ಡಗಟ್ಟಿ ಕೊಚ್ಚಿ ಕೊಂದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ್ ನನ್ನ ಪೊಲೀಸರು ಬಂಧಿಸಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.