Connect with us

ಜನರ ಮುಖದ ಮೇಲೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ: ಹರ್ಷಿಕಾ ಪೂಣಚ್ಚ

ಜನರ ಮುಖದ ಮೇಲೆ ನಗು ಮೂಡಿದಾಗಲೇ ನನ್ನ ಹುಟ್ಟುಹಬ್ಬ: ಹರ್ಷಿಕಾ ಪೂಣಚ್ಚ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಕೊರೊನಾದಿಂದಾಗಿ ಉಂಟಾಗಿರುವ ಸಂಕಷ್ಟದಿಂದಾಗಿ ಅವರು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜನರ ಮುಖದ ಮೇಲೆ ನಗು ಮೂಡಿದ ನಂತರ ಬರ್ತ್ ಡೇ ಆಚರಿಸಿಕೊಳ್ಳುವುದಾಗಿ ನಿರ್ಧರಿದ್ದಾರೆ.

ಜನರ ಮುಖದಲ್ಲಿ ನಗುವನ್ನು ಮತ್ತೆ ನೋಡಲು ನಾನು ಬಯಸುತ್ತೇನೆ. ಆ ದಿನ ಈ ನಗುತ್ತಿರುವ ರಾಣಿ ತನ್ನ ಜನ್ಮದಿನವನ್ನು ಆಚರಿಸುತ್ತಾರೆ. ಎಲ್ಲಾ ಶುಭಾಶಯಗಳು ಮತ್ತು ಆಶ್ಚರ್ಯಕರ ಉಡುಗೊರೆಗಳಿಗೆ ಧನ್ಯವಾದಗಳು. ನಾನು ಅವರನ್ನು ಪ್ರೀತಿಸುತ್ತೇನೆ ಆದರೆ ನೀವು ಕೊರೊನಾ ರೋಗಿಗಳಿಗೆ ಹಾಸಿಗೆಗಳು, ಆಮ್ಲಜನಕ ಮತ್ತು ಸಹಾಯವನ್ನು ಪಡೆಯಲು ಸಹಾಯ ಮಾಡಿದರೆ ನನ್ನ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಆಗುತ್ತದೆಎಂದು ಬರೆದುಕೊಂಡು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಆದರೆ ಹರ್ಷಿಕಾ ಮಾತ್ರ ನಾನು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲಎಂದು ಹೇಳಿದ್ದಾರೆ. ಕಾರಣ ಕೊರೊನಾದಿಂದಾಗಿ ಜನರು ಸಂಕಷ್ಟದಲ್ಲಿರುವಾಗ ತಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ.

ಜನರ ಮೊಗದ ಮೇಲೆ ನಗು ಮೂಡಿದ ನಂತರವೇ ತನ್ನ ಹುಟ್ಟುಹಬ್ಬ ಆಚರಣೆ ಎಂದು ಹರ್ಷಿಕಾ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಸೆಲೆಬ್ರಿಟಿಗಳು, ಸಿನಿಮಾ ತಾರೆಯರು ಕೊರೊನಾ ಕುರಿತಾಗಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಹಾಗೇ ಅವರಿಂದ ಆದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

Advertisement
Advertisement
Advertisement