– ಅಂಡರ್-19 ಭಾರತ ಕ್ರಿಕೆಟ್ ತಂಡದ ನಾಯಕ ಆಯುಷ್ ಮ್ಹಾತ್ರೆ ಭಾಗಿ
ಮೈಸೂರು: ಇಲ್ಲಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಲೋಕಾ ಕಲ್ಯಾಣಕ್ಕಾಗಿ ಲಲಿತಾ ಪರಮೇಶ್ವರಿ ಅಮ್ಮನವರಿಗೆ ಹರಿದ್ರಾ (ಅರಿಶಿನ) ಅರ್ಚನೆ ನಡೆಯಿತು.
ಭಾನುವಾರ (ಜೂ.7) ಪರಮಪೂಜ್ಯ ಶ್ರೀ ವೆಂಕಟಾಚಲ ಅವಧೂತ ಗುರುಮಹಾರಾಜರ ಆಶೀರ್ವಾದದೊಂದಿಗೆ ನಡೆದ ಈ ವಿಶೇಷ ಪೂಜಾ ಕೈಂಕರ್ಯದಲ್ಲಿ ಶ್ರೀ ಅರ್ಜುನ ಅವಧೂತರು ಅರ್ಚನೆ ನೆರವೇರಿಸಿದರು. ಅಮ್ಮನವರಿಗೆ ಹರಿದ್ರಾ ಅರ್ಚನೆಯೊಂದಿಗೆ ಈಶ್ವರಲಿಂಗಕ್ಕೆ ರುದ್ರಾಭಿಷೇಕ ಮಾಡಿದರು. ಈ ವೇಳೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ, ಈ ಬಾರಿ ಉತ್ತಮ ಮಳೆ-ಬೆಳೆಯಾಗಿ ಲೋಕ ಸುಭೀಕ್ಷೆಯಿಂದ ಕೂಡಿರಲಿ ಎಂದು ಕೋರಿದರು. ಭಕ್ತರ ಕಣ್ಣು ಮತ್ತು ಹೃದಯದಲ್ಲಿ ಶ್ರೀ ವೆಂಕಟಾಚಲ ಅವಧೂತರನ್ನು ಕಾಣುತ್ತಿದ್ದೇನೆ ಎಂದರು. ಇದನ್ನೂ ಓದಿ: ಶಿವಸಾಕ್ಷಾತ್ಕಾರದ ಸನ್ನಿಧಾನ – ಕೊಟ್ಟಿಯೂರಿನ ಮಹಾತ್ಮೆ

ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಈ ಕಾರ್ಯಕ್ರಮ ಸಂಜೆಯವರೆಗೂ ನೆರವೇರಿತು. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗುರುಗಳ ದರ್ಶನ ಮತ್ತು ಆಶೀರ್ವಾದ ಪಡೆದು ಪುನಿತರಾದರು. ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸ್ವತಃ ಗುರುಗಳೇ ಫಲ ಮಂತ್ರಕ್ಷತೆ, ಸಾಲಿಗ್ರಾಮ, ದೇವಿಗೆ ಅರ್ಚನೆ ಮಾಡಿದ ಅರಿಶಿನ ಮತ್ತು ತಿರುಪತಿಯಿಂದ ತರಿಸಲಾಗಿದ್ದ ಲಾಡು ಪ್ರಸಾದವನ್ನು ವಿತರಿಸಿದರು.

ಅರ್ಜುನ ಅವಧೂತರ ಆಶೀರ್ವಾದ ಪಡೆಯಲು ಮತ್ತು ಅವರಿಂದ ಸಾಲಿಗ್ರಾಮ ಪಡೆದು ಪುನಿತರಾಗಲು ಭಕ್ತ ಸಾಗರವೇ ಮುಗಿಬಿದ್ದಿತು. ಪುಟ್ಟಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಭಕ್ತರು ಭಾಗವಹಿಸಿ, ಆಶೀರ್ವಾದ ಪಡೆದರು.
ಆಯುಷ್ ಮ್ಹಾತ್ರೆ ಭೇಟಿ:
ಇದೇ ವೇಳೆ ಮೈಸೂರಿಗೆ ಆಗಮಿಸಿದ್ದ ಅಂಡರ್-19 ಭಾರತ ಕ್ರಿಕೆಟ್ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ಅರ್ಜುನ ಗುರುಗಳು ನಡೆಸುತ್ತಿರುವ ಲೋಕ ಕಲ್ಯಾಣ ಪೂಜೆಯಲ್ಲಿ ಭಾಗವಹಿಸಿ, ಅರ್ಜುನ ಗುರೂಜಿಯರ ಆಶೀರ್ವಾದ ಪಡೆದರು. ಅದೇ ರೀತಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಕಲಾವಿದರು ಮತ್ತು ಸಮಾಜದ ಗಣ್ಯರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು. ನೆರೆದ ಸಾವಿರಾರು ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಅಧಿಕ ಮಾಸ ವಿಶೇಷವಾಗಿ ಪೂಜೆ, ಆರಾಧನೆ, ಜಪ, ತಪ, ದಾನ ಧರ್ಮಕ್ಕೆ ಹೇಳಿದ ಮಾಸ, ಪ್ರತಿ 33 ತಿಂಗಳಿಗೊಮ್ಮೆ ಇದು ಬರುತ್ತದೆ. ನಮ್ಮ ಪೂಜ್ಯ ಗುರುಗಳು ಜನಿಸಿದ್ದು ಅಧಿಕ ಜೇಷ್ಠ ಮಾಸದಲ್ಲಿ ಎನ್ನುವುದು ವಿಶೇಷ.ಇದನ್ನೂ ಓದಿ:ತುಂಗಭದ್ರಾ ಜಲಾಶಯಕ್ಕೆ ಜೀವಕಳೆ – ಕಲ್ಯಾಣ ಕರ್ನಾಟಕ ರೈತರಲ್ಲಿ ಹರ್ಷ
